ಹೊಸದಿಲ್ಲಿ: ವನಿತೆಯರ ಕಾಮನ್‌ವೆಲ್ತ್ ಗೇಮ್ಸ್ ತಂಡದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತದ ಯುವ ಟೇಬಲ್ ಟೆನಿಸ್ ಆಟಗಾರ್ತಿ ದಿಯಾ ಚಿತಾಲೆ ಅವರನ್ನು ಮಂಗಳವಾರ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಅವರಿಗಾಗಿ ಅರ್ಚನಾ ಕಾಮತ್ ಅವರನ್ನು ಕೈಬಿಡಲಾಗಿದೆ.
ಆದರೆ ಪುರುಷರ ತಂಡದಲ್ಲಿ ಯಾವುದೇ ಬದಲಾವಣೆ ಮಾಡ ಲಿಲ್ಲ. ಮನುಷ್ ಶಾ ಅವರು ಮೀಸಲು ಆಟಗಾರರಾಗಿ ಮುಂದುವರಿಯ ಲಿದ್ದಾರೆ. ಅವರು ಕೂಡ ತಂಡದಿಂದ ಕೈಬಿಟ್ಟ ಕಾರಣ ದಿಲ್ಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪುರುಷರ ತಂಡವನ್ನು ಶರತ್ ಕಮಲ್ ಮುನ್ನಡೆಸಲಿದ್ದಾರೆ.
ಅಮಾನತುಗೊಂಡಿರುವ ಭಾರತೀಯ ಟೇಬಲ್ ಟೆನಿಸ್ ಫೆಡರೇ ಶನ್‌ನ ಆಡಳಿತ ವ್ಯವಹಾರ ನೋಡಿ ಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಕಳೆದ ವಾರ ವನಿತೆಯರ ಸಂಭಾವ್ಯ ತಂಡವನ್ನು ಪ್ರಕಟಿಸಿತ್ತು. ಮನಿಕಾ ಬಾತ್ರಾ, ಕಾಮತ್, ಶ್ರೀಜಾ ಅಕುಲಾ ಮತ್ತು ರೀತ್ ರಿಶ್ಯ ತಂಡದಲ್ಲಿದ್ದರೆ 19ರ ಹರೆಯದ ದಿಯಾ ಚಿತಾಲೆ ಮೀಸಲು ಆಟಗಾರ್ತಿಯಾಗಿದ್ದರು.
ಈ ತಂಡವು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಅನುಮತಿ ಪಡೆಯ ಬೇಕಿತ್ತು. ಆದರೆ ಸೋಮವಾರ ಕ್ರೀಡಾ ಸಚಿವಾಲಯವು ಚೆಂಡನ್ನು ಮತ್ತೆ ಸಿಒಎ ಅಂಗಳಕ್ಕೆ ಎಸೆದಿದ್ದು ತಂಡದ ಆಯ್ಕೆಯು ರಾಷ್ಟ್ರೀಯ ಕ್ರೀಡಾ ಫೆಡರೇ ಶನ್‌ನ ಜವಾಬ್ದಾರಿಯೆಂದು ಹೇಳಿದೆ.
ಸಿಒಎ ಸದಸ್ಯ ಎಸ್.ಡಿ. ಮೌದ್ಗಿಲ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಸೋಮವಾರ ಮತ್ತೆ ಸಭೆ ಸೇರಿ ತಂಡ ವನ್ನು ಅಂತಿಮಗೊಳಿಸಿದೆ. ಮನಿಕಾ ಜತೆ ಡಬಲ್ಸ್‌ನಲ್ಲಿ ಆಡಬೇಕಿದ್ದ ಕಾಮತ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಸ್ವಸ್ತಿಕಾ ಘೋಷ್ ಅವರನ್ನು ಮೀಸಲು ಆಟಗಾರ್ತಿಯನ್ನಾಗಿ ಹೆಸರಿಸಲಾಗಿದೆ.
ತಂಡದಲ್ಲಿ ಕೇವಲ ಒಂದು ಮಾತ್ರ ಬದಲಾವಣೆ ಮಾಡಲಾಗಿದೆ. ಅರ್ಚನಾ ಅವರ ಬದಲಿಗೆ ದಿಯಾ ನಾಲ್ಕನೇ ಆಟಗಾರ್ತಿಯಾಗಿ ತಂಡಕ್ಕೆ ಬಂದಿದ್ದಾರೆ. ಪದಕ ಗೆಲ್ಲುವ ಭರವಸೆ ಇದ್ದರೂ ಅರ್ಚನಾ ತಂಡಕ್ಕೆ ಆಯ್ಕೆಯಾಗಬೇಕಾದ ಮಾನದಂಡ ವನ್ನು ಪೂರೈಸಿಲ್ಲ.. ಹೀಗಾಗಿ ಅವರ ಆಯ್ಕೆ ಬಗ್ಗೆ ನಮ್ಮಲ್ಲಿ ಗೊಂದಲ ವಿತ್ತು. ಹೀಗಾಗಿ ಸಾಯ್ ಅವರ ಮಾರ್ಗ ದರ್ಶನ ಪಡೆಯಲು ತೀರ್ಮಾನಿಸಿದ್ದೆವು ಎಂದು ಮೌದ್ಗಿಲ್ ಹೇಳಿದರು.
ತಂಡಗಳು
ಪುರುಷರು: ಶರತ್ ಕಮಲ್, ಜಿ. ಸಥಿಯನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ, ಮನುಷ್ ಶಾ (ಮೀಸಲು ಆಟಗಾರ).
ವನಿತೆಯರು: ಮನಿಕಾ ಬಾತ್ರಾ, ದಿಯಾ ಚಿತಾಲೆ, ರೀತ್ ರಿಶ್ಯ, ಶ್ರೀಜಾ ಅಕುಲಾ, ಸ್ವಸ್ತಿಕಾ ಘೋಷ್ (ಮೀಸಲು ಆಟಗಾರ್ತಿ).