ಬೆಂಗಳೂರು: ಮಹಾಶಿವರಾತ್ರಿಯಂದು ಪಡ್ಡೆ ಹುಲಿ ತಂಡ ಬಸವಣ್ಣನವರ ವಚನ ಕಳಬೇಡ, ಕೊಲಬೇಡ ಹುಸಿಯನುಡಿಯಲು ಬೇಡ ಎನ್ನುವ ಸಾಲಿನೊಂದಿಗೆ ಆರಂಭವಾಗುವ ಹಾಡನ್ನು ಸೋಮವಾರ ಬಿಡುಗಡೆ ಮಾಡಿದೆ.
ಶಿವರಾತ್ರಿ ಹಬ್ಬದಂದು ಈ ಹಾಡು ರಿಲೀಸ್ ಆಗಿರುವುದರಿಂದ ಹಾಡನ್ನು ಮೆಚ್ಚಿಕೊಂಡು ಶೇರ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಡು ವೈರಲ್ ಆಗಿದೆ.
ಬಿಡುಗಡೆಯಾಗಿರುವ ಹಾಡಿನಲ್ಲಿ ಯುವ ಪೀಳಿಗೆಗೆ ಅರ್ಥಗರ್ಭಿತವಾದ ವಚನಗಳನ್ನು ಸುಶ್ರಾವ್ಯವಾಗಿ ಕೇಳೋ ಅವಕಾಶವನ್ನು ಪಡ್ಡೆಹುಲಿ ಚಿತ್ರ ತಂಡ ಸಾಧ್ಯವಾಗಿಸಿರುವುದಕ್ಕೆ ಹ್ಯಾಟ್ಸ್ ಅಫ್ ಹೇಳಲೇಬೇಕು. ಅದೇ ರೀತಿ ವಚನಗಳನ್ನು ಯುವ ಸಮೂಹಕ್ಕೆ ಬೇಕಾಗುವ ರೀತಿಯಲ್ಲಿ ಹಾಡನ್ನು ರಚನೆ ಮಾಡಿ ಅದಕ್ಕೊಂದು ಸುಂದರವಾದ ಸಂಗೀತವನ್ನು ಅಜನೀಶ್ ಕಂಪೋಸ್ ಮಾಡಿದ್ದು, ಇಂಪಾದ ಹಾಡನ್ನು ನೀವೇ ಒಮ್ಮೆ ಕೇಳಿ ನೋಡಿ…
ಈ ಹಾಡಿನ ಮೂಲಕ ನಾರಾಯಣ ಶರ್ಮಾ ಎಂಬ ಹಿನ್ನೆಲೆ ಗಾಯಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಅದ್ಬುತ ಗಾಯಕರಾಗಿ ಹೊರಹೊಮ್ಮುವಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೇ ಪಡ್ಡೆ ಹುಲಿ ಸಿನಿಮಾದಲ್ಲಿ ನಟ ಶ್ರೇಯಸ್ ಮಂಜು ಅಭಿನಯಕ್ಕಾಗಿ ಸಿನಿಮಾ ಆರಂಭಕ್ಕೂ ಮುನ್ನ ಎಲ್ಲಾ ರೀತಿಯಿಂದಲೂ ತರಬೇತಿ ಪಡೆದು, ಸಿನಿಮಾದಲ್ಲಿನ ನಟನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ನ್ಯಾಯ ಒದಗಿಸಿದ್ದಾರೆ.
ಸದ್ಯದ ಯುದ್ಧದ ಕಾರ್ಮೋಡದಲ್ಲಿರುವ ಪರಿಸ್ಥಿತಿಯಲ್ಲಿ ದೇಶಕ್ಕೆ, ಪ್ರಪಂಚಕ್ಕೆ ಶಾಂತಿ ಮಂತ್ರ..ಹೀಗಾಗಿ ಒಳ್ಳೆಯ ಸಮಯದಲ್ಲಿ ಬಸವಣ್ಣನವರ ವಚನದ ಹಾಡನ್ನು ಪಡ್ಡೆಹುಲಿ ತಂಡ ಬಿಡುಗಡೆ ಮಾಡಿದ್ದು, ಹಾಡನ್ನು ನೀವೂ ಒಮ್ಮೆ ಕೇಳಿ ನೋಡಿ..