Advertisement
ಮೊದಲೆಲ್ಲ ಚೌತಿ ಅಥವಾ ನವರಾತ್ರಿಯ 40 ದಿನಗಳ ಮುನ್ನವೇ ಹುಲಿ ವೇಷ ಹಾಕುವವರು ಮುಹೂರ್ತ ಮಾಡುತ್ತಿದ್ದರು. ಇದಕ್ಕೆ ‘ಊದು’ ಇಡುವುದು ಎನ್ನುತ್ತಾರೆ. ಆದರೆ ಆಧುನಿಕವಾಗಿ ಕಾಲ ಬದಲಾದ ಕಾರಣದಿಂದ 40 ದಿನ ಇದ್ದ ಊದು ಕ್ರಮ ಒಂದೆರಡು ದಿನಕ್ಕೆ ಸೀಮಿತವಾಗಿದೆ.
Related Articles
Advertisement
ಊದು ದಿನ ವೇಷ ಹಾಕದೆ ನರ್ತನ ಸೇವೆ
- ಈಗ ರಂಗ್‌ಗೆ ಕುಳಿತುಕೊಳ್ಳುವ ಮುನ್ನಾ ದಿನ ಊದು ಕಾರ್ಯಕ್ರಮ ನಡೆಯುತ್ತದೆಯಾದರೂ ವೇಷಧಾರಿ ಅದಕ್ಕಿಂತಲೂ ಒಂದು ವಾರ ಹಿಂದಿನಿಂದಲೇ ವ್ರತಾಚರಣೆಯಲ್ಲಿರುತ್ತಾರೆ.
- ಪೂಜೆ ಬಳಿಕ ಗುರು ಹಿರಿಯರ ಆಶೀರ್ವಾದ ಪಡೆದು, ವೇಷ ಹಾಕದೆ ನರ್ತನ ಮಾಡುತ್ತಾರೆ. ಆಗ ಕೆಲವರಿಗೆ ಆವೇಶ ಬರುವುದೂ ಇದೆ.
ಎಮ್ಮೆಕೆರೆ ಪ್ರಂಡ್ಸ್ ಸರ್ಕಲ್ ಸ್ಥಾಪಕಾಧ್ಯಕ್ಷ ಕೃಷ್ಣಾನಂದ ಶೆಟ್ಟಿ ಅವರ ಪ್ರಕಾರ, ಎಮ್ಮೆಕೆರೆ ಪ್ರಂಡ್ಸ್ ಸರ್ಕಲ್‌ನಿಂದ ಈಗಲೂ ಚೌತಿಯ ದಿನವೇ ಊದು ನಡೆಯುತ್ತದೆ. ಅಂದಿನಿಂದ ಮಾಂಸಾಹಾರ ತ್ಯಜಿಸಿ ಸಸ್ಯಾಹಾರ ಸೇವಿಸ ಬೇಕು. ಬಳಿಕ ಪ್ರತೀ ದಿನವೂ ಚಪ್ಪಲಿ ಧರಿಸದೆ ಹುಲಿ ವೇಷದ ಕುಣಿತ ಅಭ್ಯಾಸ ಮಾಡಬೇಕು ಎಂಬುದು ನಿಯಮ. ಆದರೆ, ಈಗ ಒತ್ತಡದ ಕಾರಣದಿಂದ ಹುಲಿ ವೇಷ ಹೊರಡುವ ಮುನ್ನಾ ದಿನ ಕೆಲವೆಡೆ ಊದು ಇಡಲಾಗುತ್ತದೆ. ಊದು ಈಗ ಭಾರೀ ಫೇಮಸ್!
ಊದು ಕಾರ್ಯಕ್ರಮವನ್ನು ಈಗ ವೈಭವದಿಂದ ಆಚರಿಸಲಾಗುತ್ತದೆ. ಗಣ್ಯರೂ ಬರುತ್ತಾರೆ. ಚಿತ್ರ ನಟ ರಿಷಭ್ ಶೆಟ್ಟಿ ಅವರು ಗುರುವಾರ ರಾತ್ರಿ ಊದು ಕಾರ್ಯಕ್ರಮಕ್ಕೆ ಬಂದಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಕ್ರಮವೊಂದರಲ್ಲಿ ಹುಲಿ ಕುಣಿತದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಯಾವ ಟೀಮ್‌ನ ಹುಲಿ ಯಾವಾಗ ಎನ್ನುವ ಬದಲು ಅವರ ಊದು ಯಾವಾಗ ಎಂದು ಕೇಳುವ ದಿನಗಳು ಈಗ! -ದಿನೇಶ್ ಇರಾ