Advertisement

ಬಿಡುಗಡೆಗೂ ಮುನ್ನವೇ 9 ದಾಖಲೆ ಬರೆದ ಪಡ್ದಾಯಿ!

02:01 PM Jul 12, 2018 | Team Udayavani |

ಕೆಲವೊಂದು ತುಳು ಸಿನೆಮಾಗಳು ಬಿಡುಗಡೆಯಾಗಿ ಕೆಲವೇ ದಿನದಲ್ಲಿ ಹೇಗೆ ಮರೆಯಾಗುತ್ತವೆ ಎಂಬುದು ಗೊತ್ತಾಗಲ್ಲ. ಆದರೆ, ಇನ್ನಷ್ಟೇ ಬಿಡುಗಡೆಯಾಗಬೇಕಾದ ತುಳು ಸಿನೆಮಾವೊಂದು 9 ರಾಷ್ಟ್ರೀಯ/ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ನಿಜಕ್ಕೂ ವಿಶೇಷ. ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯಸಿಂಹ ನಿರ್ದೇಶನದ ‘ಪಡ್ಡಾಯಿ’ ಸಿನೆಮಾ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳಲ್ಲಿ ಅತ್ಯುತ್ತಮ ತುಳು ಸಿನೆಮಾ ಪ್ರಶಸ್ತಿಯನ್ನು ಕಳೆದ ವರ್ಷ ಪಡೆದುಕೊಂಡಿತ್ತು.

Advertisement

ಡಾಕ್‌ ಸ್ಕೂಲ್‌ ಕ್ಲಿನಿಕ್‌ ಕಟ್ಮಂಡು ಬರವಣಿಗೆ ಕಾರ್ಯಾಗಾರ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ, ನ್ಯೂಯಾರ್ಕ್‌ ಭಾರತೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ, ಇನ್ನೋವೇಟಿವ್‌ ಚಲನಚಿತ್ರೋತ್ಸವ, ಮೆಲ್ಬೋರ್ನ್ ಆಸ್ಟ್ರೇಲಿಯಾ ಚಲನಚಿತ್ರೋತ್ಸವ, ವಿಯನ್ನಾ ಆಸ್ಟ್ರಿಯಾ ಚಲನಚಿತ್ರೋತ್ಸವ, ಹ್ಯಾಬಿಟಾಟ್‌ ಚಲನಚಿತ್ರೋತ್ಸವ, ಜಾಗರಣ್‌ ಚಲನಚಿತ್ರೋತ್ಸವಕ್ಕೆ ಪಡ್ಡಾಯಿ ಆಯ್ಕೆಯಾಗುವ ಮೂಲಕ ತುಳು ಸಿನೆಮಾವೊಂದು ದಾಖಲೆ ಬರೆದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next