Advertisement

ಚಟದಿಂದ ಮುಕ್ತರನ್ನಾಗಿಸಲು ಪಾದಯಾತ್ರೆ

04:18 PM Apr 08, 2021 | Team Udayavani |

ಗುಳೇದಗುಡ್ಡ : ಪಟ್ಟಣದ ಮರಡಿಮಠದ ಲಿಂ.ಶ್ರೀ 10ನೇ ಕಾಡಸಿದ್ದೇಶ್ವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಬೆಳಗ್ಗೆ ದುಶ್ಚಟಗಳ ಭೀಕ್ಷೆ ಸದ್ಗುಣಗಳ ದೀಕ್ಷೆ ಎಂಬ ವಿನೂತನ ಪಾದಯಾತ್ರೆ ನಡೆಯಿತು.

Advertisement

ಶ್ರೀಮಠದಲ್ಲಿ ದಿನಂಪ್ರತಿ ಸಂಜೆ ನಡೆಯುವ ಪ್ರವಚನದಲ್ಲಿ ಶರಣ, ಸಂತರ ಆದರ್ಶ ತತ್ವ ಚಿಂತನೆಗಳು ಜನರ ನೆತ್ತಿಯ ಬುತ್ತಿ ತುಂಬಿದರೆ ಪ್ರತಿದಿನ ಬೆಳಗ್ಗೆ ದುಶ್ಚಟವಾದಿಗಳ ಬದುಕು ಬದಲಾಯಿಸುವ ದೃಷ್ಟಿಯಿಂದ ವಿನೂತನ ಪ್ರಯತ್ನವೊಂದು ಗುಳೇದಗುಡ್ಡದಲ್ಲಿ ನಡೆಯಿತು. ದುಶ್ಚಟಗಳ ಬೀಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಈ ವಿನೂತನ, ಅರ್ಥಪೂರ್ಣ ಪಾದಯಾತ್ರೆ ಈಗ ಗುಳೇದಗುಡ್ಡ ಜನರ ಮೆಚ್ಚುಗೆ ಗಳಿಸಿದೆ. ಪಾದಯಾತ್ರೆಯಲ್ಲಿ ಸ್ವಾಮೀಜಿಗಳು ಜೋಳಿಗೆ ಹಿಡಿದು ನಡೆಯುತ್ತಿದ್ದರೆ ದುಶ್ಚಟಗಳ ದಾಸರು ತಮ್ಮ ದುಶ್ಚಟಗಳನ್ನ ಈ ಜೋಡಳಿಗೆಯಲ್ಲಿ ಹಾಕಲಿ, ಬದುಕಿನಲ್ಲಿ ಸದ್ಗುಣಗಳ ದೀಕ್ಷೆ ಪಡೆಯಲಿ ಎನ್ನುವ ಉದ್ದೇಶ ಹೊತ್ತು ಈ ದುಶ್ಚಟಗಳ ಜೋಳಿಗೆ ಗುಳೇದಗುಡ್ಡದಲ್ಲಿ ಸಂಚರಿಸಿತು.

ಇಲ್ಲಿತನಕ ಇದ್ದ ಕೆಟ್ಟ ಚಟಾದಿಗಳಿಂದ ಪ್ರತಿಯೊಬ್ಬರೂ ಮುಕ್ತರಾಗಲಿ ಎಂಬ ಸದುದ್ದೇಶದಿಂದ ಶ್ರೀಮಠದಿಂದ ಶ್ರೀ ವಿವೇಕಾನಂದ ದೇವರು ಈ ವಿನೂತನ “ದುಶ್ವಟಗಳ ಬೀಕ್ಷೆ ಸದ್ಗುಣಗಳ ದೀಕ್ಷೆ’ ಎಂಬ ವಿಶಿಷ್ಟ ಪಾದಯಾತ್ರೆ ಕೈಗೊಂಡಿದ್ದಾರೆ. ಪ್ರತಿಯೊಬ್ಬರೂ ಇಲ್ಲಿಯ ತನಕ ಜೀವನದಲ್ಲಿ ಹಾಕಿಕೊಂಡಿದ್ದ ಕೆಟ್ಟ ಚಟಗಳನ್ನು ಬಿಟ್ಟು ಇನ್ನು ಮುಂದೆ ಬದುಕಿನಲ್ಲಿ ಉತ್ತಮ ನಡೆಗಳನ್ನು ಪಾಲಿಸಬೇಕೆಂದು ಶ್ರೀಅಭಿನವ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.

ಪಾದಯಾತ್ರೆಯಲ್ಲಿ ಗುಣದಾಳದ ವಿವೇಕಾನಂದ ದೇವರು, ಚಿನ್ನಮಯಗಿರಿಯ ವೀರಮಹಾಂತ ಶ್ರೀಗಳು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಸಿದ್ದಪ್ಪ ಹನಮಸಾಗರ, ಚನ್ನಮ್ಮ ಜವಳಿ, ಗೌರಿ ಕಲಬುರ್ಗಿ, ಸುವರ್ಣ ಲಂಡುನ್ನವರ, ಜಂಪವ್ವ ಕಲಬುರ್ಗಿ, ಆಶಾ ರಾಜನಾಳ, ಅಕ್ಕಮ್ಮ ಅಂಕದ, ಕವಿತಾ ಮೆಗೆಣ್ಣಿ, ಈರಮ್ಮ ಮಾಳಗಿ, ರೇಖಾ ಕೆಲೂಡಿ, ನೀಲವ್ವ ತಾಂಡೂರ, ಜಯಶ್ರೀ ಅಂಕದ ಮತ್ತಿತರರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next