Advertisement

ಹರೆಯದ ಮನಸ್ಸಿನಲ್ಲಿ ಯಾಕೆ ಸಿಕ್ಕೆ!

04:35 PM Dec 14, 2022 | Team Udayavani |

ಹರೆಯದ ಪ್ರೇಮಕಥೆಗಳನ್ನು ತೆರೆಮೇಲೆ ತರಲು ಸಿದ್ಧವಾಗಿರುವ ಚಿತ್ರ “ಪದವಿ ಪೂರ್ವ’. ಯೋಗರಾಜ್‌ ಭಟ್‌ ಹಾಗೂ ರವಿ ಶ್ಯಾಮನೂರ್‌ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರ ಡಿ.30ರಂದು ತೆರೆಕಾಣುತ್ತಿದೆ.

Advertisement

ಈಗ ಚಿತ್ರದ ರೊಮ್ಯಾಂಟಿಕ್‌ ಹಾಡಾಗಿರುವ “ಯಾಕೆ ಸಿಕ್ಕೆ’ ಹಾಡು ಬಿಡುಗಡೆಯಾಗಿದೆ. ನಟ ಸುದೀಪ್‌ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಹದಿಹರೆಯದ ಕಾಲೇಜು, ಫ್ರೆಂಡ್‌ಶಿಪ್‌, ಪ್ರೇಮ ಕಾವ್ಯ ಈ ಹಾಡಿನಲ್ಲಿ ಹೇಳಲಾಗಿದೆ. ಕಿಚ್ಚ ಸುದೀಪ್‌ ಅವರ ನಿವಾಸದಲ್ಲಿ ಹಾಡು ಬಿಡುಗಡೆ ಮಾಡಿದ್ದು,ಯೋಗರಾಜ್‌ ಭಟ್‌, ನಿರ್ದೇಶಕ ಹರಿಪ್ರಸಾದ್‌ ಜಯಣ್ಣ, ನಾಯಕ ಪೃಥ್ವಿ ಶ್ಯಾಮನೂರು, ನಾಯಕಿ ಅಂಜಲಿ ಅನೀಶ್‌ ಹಾಜರಿದ್ದರು.

ಪೃಥ್ವಿ ಶಾಮನೂರು ಮೊದಲ ಸಿನಿಮಾದಲ್ಲೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಸಿನಿಮಾ ಮೂಡಿಬಂದಿರುವ ರೀತಿ.

“ನಾನು ಪಿಯುಸಿ ಇದ್ದಾಗ ಈ ಸಿನಿಮಾ ಆರಂಭವಾಗಿದ್ದು. ನನ್ನ ರಿಯಲ್‌ ಲೈಫ್ಗೆ ತುಂಬಾ ಹತ್ತಿರವಾದ ಕಥೆ. ಇಡೀ ಸಿನಿಮಾ ಸೊಗಸಾಗಿ ಮೂಡಿಬಂದಿದೆ. ಮುಖ್ಯವಾಗಿ ಈ ಸಿನಿಮಾದಲ್ಲಿನನಗೆ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿತು. ಸಿನಿಮಾತಡವಾದಷ್ಟು ನಾನು ಹೆಚ್ಚೆಚ್ಚು ಕಲಿತೆ. ನನ್ನ ಮಿಸ್ಟೆಕ್‌ಗಳನ್ನೆಲ್ಲಾಸರಿಪಡಿಸುತ್ತಾ ಬಂದೆ. ಅದೇ ಕಾರಣದಿಂದ ಸಿನಿಮಾದಲ್ಲಿಚೆನ್ನಾಗಿ ನಟಿಸಲು ಸಾಧ್ಯವಾಯಿತು. ಮುಖ್ಯವಾಗಿ ಒಬ್ಬಕಲಾವಿದನಾಗಲು ಏನೇನು ಅಂಶಗಳು ಮುಖ್ಯವೋ,ಅವೆಲ್ಲವನ್ನು ಈ ಸಿನಿಮಾದಿಂದ ಕಲಿತೆ’ ಎಂದು ಖುಷಿಯಿಂದ ಹೇಳುತ್ತಾರೆ ಪೃಥ್ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next