Advertisement
ಮೂರು ದಿನಗಳ ಭೇಟಿಗೆ ಮಂಗಳೂ ರಿಗೆ ಆಗಮಿಸಿರುವ ಅವರು ರವಿವಾರ ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಹಳೆ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
ಮನಪಾ ಅಧಿಕಾರಿಗಳಿಗೆ ಕಲಬುರಗಿ ಜಿಲ್ಲೆಯ ಉದಾಹರಣೆ ನೀಡಿದ ಉಪ ಲೋಕಾಯುಕ್ತರು, ಅಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಅವ್ಯವಸ್ಥೆಯ ಗೂಡಾಗಿದ್ದು, ನಾಯಿ, ಹಂದಿ, ಕಾಗೆಗಳು ತ್ಯಾಜ್ಯವನ್ನು ಕಿತ್ತು ತಿನ್ನುತ್ತಿವೆ. ಸ್ಥಳೀಯರಿಗೂ ಕಾಟ ಕೊಡುತ್ತಿವೆ. ಅಲ್ಲಿನ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇಲ್ಲಿಯ ವರೆಗೆ ಭೇಟಿ ನೀಡಿರುವ ಜಿಲ್ಲೆಗಳ ಪೈಕಿ ಮಂಗಳೂರಿನ ವ್ಯವಸ್ಥೆ ಅತ್ಯಂತ ಉತ್ತಮವಾಗಿದೆ ಎಂದರು.
Advertisement
ಎಲ್ಲ ಜಿಲ್ಲೆಗಳಿಗೂ ಭೇಟಿ, ಪರಿಶೀಲನೆಈ ವೇಳೆ ಮಾಧ್ಯದವರ ಜತೆಗೆ ಮಾತನಾಡಿದ, ಉಪಲೋಕಾ ಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಲೋಕಾಯುಕ್ತ ದಿಂದ ತ್ಯಾಜ್ಯ ನಿರ್ವಹಣೆ, ಸರಕಾರಿ ಜಾಗಗಳ ಅತಿಕ್ರಮಣ, ಆಸ್ಪತ್ರೆ, ಜೈಲು, ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ಈಗಾಗಲೇ ಕಲಬುರಗಿ, ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಲೋಕಾಯುಕ್ತ ನ್ಯಾಯಮೂರ್ತಿಗಳು 15 ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಡೆಸಿದ ಸಂಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಲಾಗುವುದು ಎಂದರು. ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿಯೂ ಬೆಂಗಳೂರಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಗೈಲ್ ಸಂಸ್ಥೆಯವರು ಈ ನಿಟ್ಟನಲ್ಲಿ ಮುಂದೆ ಬಂದಿದ್ದಾರೆ. ಅವರನ್ನು ಇಲ್ಲಿಗೆ ಕರೆಸಿ, ಹಳೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು. ಗೊಬ್ಬರದಿಂದ ತರಕಾರಿ ಬೆಳೆದು ಪರೀಕ್ಷಿಸಿ
ತಾಜ್ಯದಿಂದ ಗೊಬ್ಬರ ತಯಾರಿಸುವುದು ಉತ್ತಮ ಪರಿಕಲ್ಪನೆ. ಆದರೆ ಅದರಿಂದ ಬೆಳೆಯುವ ತರಕಾರಿಗಳ ಮೇಲೆ ಏನಾದರೂ ಈ ತ್ಯಾಜ್ಯದ ವಿಷಕಾರಿ ಅಂಶಗಳು ಸೇರುತ್ತವೆಯೇ ಎಂದು ಪರೀಕ್ಷಿಸುವ ಅಗತ್ಯವಿದೆ. ಆದ್ದರಿಂದ ಮೊದಲು ನಿಮ್ಮ ಮನೆಯಲ್ಲೇ ಈ ಗೊಬ್ಬರದಿಂದ ಬೆಳೆಸಿ ಪರೀಕ್ಷೆಗೆ ಒಳಪಡಿಸಿ ನೋಡಿ ಎಂದು ಅಪರ ಜಿಲ್ಲಾಧಿಕಾರಿ ಮತ್ತು ಮನಪಾ ಆಯುಕ್ತರಿಗೆ ಉಪಲೋಕಾಯುಕ್ತರು ಸೂಚನೆ ನೀಡಿದರು.