Advertisement
ಮಂಗಳವಾರ ರಾತ್ರಿ ಸುರಿದ ಮಳೆಗೆ ತ್ಯಾಜ್ಯದ ರಾಶಿಯು ಡಂಪಿಂಗ್ ಯಾರ್ಡ್ ನಿಂದ ಹೊರಗೆ ಬಂದಿದ್ದು, ಸಮೀಪದ ಮಂದಾರ ಪರಿಸರದಲ್ಲಿ ವ್ಯಾಪಿಸಿದೆ. ಬೃಹತ್ ಗಾತ್ರದ ತ್ಯಾಜ್ಯ ರಾಶಿಯು ಮಳೆ ನೀರಿನೊಂದಿಗೆ ಬರುವ ವೇಗಕ್ಕೆ 2,000ಕ್ಕೂ ಅಧಿಕ ಅಡಿಕೆ ಮರ, 150ಕ್ಕೂ ಅಧಿಕ ತೆಂಗಿನಮರ, ಸುಮಾರು 75ಕ್ಕೂ ಅಧಿಕ ಇತರ ಮರಗಳು ತ್ಯಾಜ್ಯ ರಾಶಿಯೊಂದಿಗೆ ನೆಲಸಮವಾಗಿದೆ.
ಸದ್ಯ ಒಂದು ಹಳೆಯ ಮನೆ ತ್ಯಾಜ್ಯ ರಾಶಿಯಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ನಾಲ್ಕು ಮನೆಗಳು ಭಾರೀ ಅಪಾಯದಲ್ಲಿದ್ದರೆ, 6 ಮನೆಗಳು ಅಪಾಯದಲ್ಲಿದೆ. ಸಂಪರ್ಕ ರಸ್ತೆಯೊಂದು ಬಂದ್ ಆಗಿದೆ. ನಾಗಬನ-ದೈವಸ್ಥಾನ ಕೂಡ ತ್ಯಾಜ್ಯ ರಾಶಿಯಲ್ಲಿ ನೆಲಸಮವಾಗಿದೆ. ಶತಕದ ಸಂಭ್ರಮದ ಮೊದಲೇ ಆತಂಕ
ಮಂದಾರ ರವೀಂದ್ರ ಭಟ್ ಮನೆಗೆ ಕೆಲವೇ ದಿನಗಳ ಒಳಗೆ ನೂರು ವರ್ಷ ಆಗುವ ಸಂಭ್ರಮದಲ್ಲಿತ್ತು. ಇದಕ್ಕಾಗಿ ಕಾರ್ಯಕ್ರಮಗಳನ್ನು ಕೂಡ ಸಂಘಟಿಸ ಲಾಗಿತ್ತು. ಆದರೆ, ಈಗ ಪಚ್ಚನಾಡಿಯ ತ್ಯಾಜ್ಯದ ರಾಶಿಯು ನೇರವಾಗಿ ರವೀಂದ್ರ ಭಟ್ ಮನೆಯ ಮುಂಭಾಗದಿಂದ ಹಾದುಹೋಗಿದ್ದು, ಮನೆ ಅಪಾಯ ದಲ್ಲಿದೆ. ಯಾವುದೇ ಕ್ಷಣದಲ್ಲಿ ಮನೆಗೂ ತ್ಯಾಜ್ಯ ಬರುವ ಸಾಧ್ಯತೆಯಿದೆ. ಹೀಗಾಗಿ ಮನೆಯ ಅಗತ್ಯ ಸಾಮಗ್ರಿಗಳೊಂದಿಗೆ ಸದ್ಯ ಅವರ ಮನೆ ಖಾಲಿ ಮಾಡಲಾಗಿದೆ. ಇನ್ನು ಕೆಲವು ಮನೆಗಳ ನಿವಾಸಿಗಳು ಕೂಡ ತಮ್ಮ ಮನೆ ಸಾಮಗ್ರಿಗಳೊಂದಿಗೆ ಮನೆ ತೊರೆದಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
Related Articles
ಮಂದಾರ ಪರಿಸರವೆಲ್ಲ ಸದ್ಯ ಕೊಳಚೆ ನೀರು ಹಾಗೂ ತ್ಯಾಜ್ಯ ರಾಶಿಯಿಂದ ತುಂಬಿಕೊಂಡಿದೆ. ಕ್ಷಣಕ್ಕೊಂದು ಮರಗಳು ತ್ಯಾಜ್ಯಕ್ಕೆ ಆಹುತಿಯಾಗುತ್ತಿದೆ. ಮಳೆ ಇನ್ನೂ ಮುಂದುವರಿದರೆ ಇನ್ನಷ್ಟು ಅಪಾಯ ಬಹುತೇಕ ನಿಚ್ಚಳಾವಾಗಿದೆ. ಹೀಗಾಗಿ ಪರಿಸರದ ಜನರು ಸದ್ಯ ಆತಂಕಿತರಾಗಿದ್ದಾರೆ.
Advertisement