Advertisement

ಪ. ಜಾ. ಏಳಿಗೆಗೆ ರಾಜ್ಯ ಸರಕಾರದಿಂದ  ಉನ್ನತ ಕೊಡುಗೆ: ಸಚಿವ  ರೈ

02:47 PM Apr 15, 2017 | |

ಮಂಗಳೂರು: ಪರಿಶಿಷ್ಟ ವರ್ಗಗಳ ನಿಗಮದ ಕೋಟ್ಯಂತರ ರೂಪಾಯಿ ಸಾಲ ಮನ್ನಾದಂತಹ ಹಲವು ಜನಪರ ಕಾರ್ಯಗಳ ಮೂಲಕ ರಾಜ್ಯ ಸರಕಾರ ಅವರ ಏಳಿಗೆಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಜತೆಗೆ ವಿದ್ಯಾರ್ಥಿ ನಿಲಯಗಳ ಹೆಚ್ಚಳ, ವಿದ್ಯಾಸಿರಿ ಯೋಜನೆಗಳ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಶುಕ್ರವಾರ ನಗರದ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ, ಜಿ.ಪಂ., ಮನಪಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆ ಉದ್ಘಾಟಿಸಿದರು.

ಡಾ| ಅಂಬೇಡ್ಕರ್‌ ಅವರಿಂದ ರಚಿತವಾದ ಸಂವಿಧಾನದ ಆಶೋತ್ತರ ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾನತೆ ಬದುಕು ಸಂವಿಧಾನದ ಆಶಯವಾಗಿದ್ದು, ಎಲ್ಲಿವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿ ವರೆಗೆ ದೇಶದಲ್ಲಿ ಮೀಸಲಾತಿ ಅಗತ್ಯ ಎಂದು ಅವರು ಹೇಳಿದರು. 

ಬಹುಕಾಲದ ಬೇಡಿಕೆಯಾದ ನಗರದ ಉರ್ವಸ್ಟೋರ್‌ನಲ್ಲಿ ಡಾ| ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಸಂಘಟನೆಯವರು ಕೇಳಿದ ಸ್ಥಳದಲ್ಲೇ ಭವನ ನಿರ್ಮಾಣಕ್ಕೆ ಮುತುವರ್ಜಿ ವಹಿಸಲಾಗಿದೆ ಎಂದರು. 

ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ನಾವು ಸಂವಿಧಾನಕ್ಕೆ ಅಗೌರವ ತೋರಿದರೆ ಅದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ. ಹೀಗಾಗಿ ಸಂವಿಧಾನವನ್ನು ಬಲಿಷ್ಠಗೊಳಿಸುವ ಕಾರ್ಯಕ್ಕೆ ನಾವು ಪಣತೊಡಬೇಕು ಎಂದರು.
 
ಸುರತ್ಕಲ್‌ ಗೋವಿಂದದಾಸ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ| ಆಶಾಲತಾ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ನಡೆದ ಜಾಥಾವನ್ನು ಮೇಯರ್‌ ಕವಿತಾ ಸನಿಲ್‌ ಉದ್ಘಾಟಿಸಿದರು. 

Advertisement

ಶಾಸಕ ಮೊದಿನ್‌ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಮೇಯರ್‌ ರಜನೀಶ್‌, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಎಡಿಸಿ ಕುಮಾರ್‌, ಜಿ.ಪಂ. ಮುಖ್ಯಾಧಿಕಾರಿ ಡಾ| ಎಂ.ಆರ್‌. ರವಿ, ಪೊಲೀಸ್‌ ಕಮಿಷನರ್‌ ಎಂ. ಚಂದ್ರಶೇಖರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ, ಡಿಸಿಪಿಗಳಾದ ಡಾ| ಸಂಜೀವ ಪಾಟೀಲ್‌, ಶಾಂತಾರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ಮೊದಲಾದವರು ಉಪಸ್ಥಿತರಿದ್ದರು. 

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೀರ್ತಿಕುಮಾರಿ, ಸಂಜೀವ ಸೂಟರ್‌ಪೇಟೆ, ಡಾ| ಆಶಾಲತಾ, ಶೈಲೇಶ್‌ ಕೋಟ್ಯಾನ್‌, ಉಮೇಶ್‌ ಕೆ. ಅವರನ್ನು ಸಮ್ಮಾನಿಸಲಾಯಿತು. ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ| ಸಂತೋಷ್‌ಕುಮಾರ್‌ ಸ್ವಾಗತಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next