Advertisement
ಪಂದ್ಯದ ನಡುವೆ ಗಾಯದ ಸಮಸ್ಯೆ ಯಿಂದ ಹಂಗೇರಿಯ ಗಾಗ್ಲೆ ಕ್ರಾಝ್ ಪಂದ್ಯ ತ್ಯಜಿಸಿದ್ದರಿಂದ ಕಶ್ಯಪ್ ಮುಂದಿನ ಸುತ್ತಿಗೇರಿದರು. ಕ್ರಾಝ್ ಪಂದ್ಯ ತ್ಯಜಿಸಿದ ವೇಳೆ ಕಶ್ಯಪ್ 21-18, 17-6 ಗೇಮ್‌ಗಳಿಂದ ಮುನ್ನಡೆಯಲ್ಲಿದ್ದರು. ಆಬಳಿಕ ನಡೆದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಶ್ಯಪ್ 16ನೇ ಶ್ರೇಯಾಂಕದ ಶ್ರೀಲಂಕಾದ ನಿಲುಕ ಕರುಣ ರತ್ನೆ ಅವರನ್ನು 21-19, 21-10 ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದರು. ಅಲ್ಲಿ ಅವರು ತನ್ನ ದೇಶದವರೇ ಆದ ಸಮೀರ್ ವರ್ಮ ಅವರನ್ನು ಎದುರಿಸಲಿದ್ದಾರೆ. ಸಮೀರ್ ದಿನದ ಎರಡು ಪಂದ್ಯಗಳಲ್ಲಿ ಕ್ರೊವೇಶಿಯದ ಚ್ವೊನಿಮಿರ್ ದುರ್ಗಿಜಾಕ್ ಮತ್ತು ಬ್ರಝಿಲ್ನಕೊಹಿಲೊ ಅವರನ್ನು ಸೋಲಿಸಿದ್ದರು.
ದ್ವಿತೀಯ ಶ್ರೇಯಾಂಕದ ಪ್ರಣಯ್ ಅಯರ್‌ಲ್ಯಾಂಡಿನ ಜೋಶುವ ಮಾಗಿ ಅವರನ್ನು 21-13, 21-17 ಹಾಗೂ ಹಾಲೆಂಡಿನ ಮಾರ್ಕ್ ಕಾಲೊj ಅವರನ್ನು 21-8, 14-21, 21-16 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್ ತಲುಪಿ ದರು. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನಿನ ಕಾಂತ ಸುನೆಯಾಮ ಅವರನ್ನು ಎದುರಿಸಲಿದ್ದಾರೆ. ಮೂರನೇ ಶ್ರೇಯಾಂಕದ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಅವರು ಇಂಡೋ ನೇಶ್ಯದ ಹೆಂಡ್ರ ಟಾಂಡ್ಯಜ ಮತ್ತು ಆ್ಯಂಡ್ರೊ ಯುನಾಂಟೊ ಅವರನ್ನು 21-16, 21-9 ಗೇಮ್‌ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಹಿರೋಕಿ ಒಕಾಮುರ ಮತ್ತು ಮಸಾಯುಕಿ ಒನೊಡೆರ ಅವರನ್ನು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸಿಸ್ ಅಲ್ವಿನ್ ಮತ್ತು ತರುಣ್ ಕೋನ ಅವರು ಪ್ರಬಲ ಹೋರಾಟ ನಡೆಸಿ 19-21, 21-9, 14-21 ಗೇಮ್‌ಗಳಿಂದ ಏಳನೇ ಶ್ರೇಯಾಂಕದ ಹಿರೋಕಿ ಒಕಾಮುರ ಮತ್ತು ಮಸಾಯುಕಿ ಒನೊಡೆರ ಅವರಿಗೆ ಶರಣಾದರು. ವನಿತೆ ಯರ ಡಬಲ್ಸ್‌ನಲ್ಲೂ ಭಾರತದ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ರಾಮ್ ಅವರು ಏಳನೇ ಶ್ರೇಯಾಂಕದ ಜಪಾನಿನ ಮಾಯು ಮಾಟ್ಸುಮೊಟೊ ಮತ್ತು ವಕಾನಾ ನಾಗಹರ ಅವರಿಗೆ 18-21, 9-21 ಗೇಮ್‌ಗಳಿಂದ ಶರಣಾದರು.
Related Articles
Advertisement