ಪಣಜಿ : ಕಾಂಗ್ರೇಸ್ ಪಕ್ಷದ ವರಿಷ್ಠ, ಚುನಾವಣಾ ನಿರೀಕ್ಷಕ ಪಿ.ಚಿದಂಬರಂ ರವರು ಗೋವಾ ರಾಜ್ಯ ವಿಧಾನಸಭಾ ಚುನಾವಣೆಗೆ ರಣನೀತಿ ಸಿದ್ಧಪಡಿಸಲು ಮುಂದಿನ ವಾರ ಗೋವಾಗೆ ಆಗಮಿಸಲಿದ್ದಾರೆ.
ಕಾಂಗ್ರೇಸ್ ಪಕ್ಷವು ಸದ್ಯ ಉಮೇದುವಾರರ ಆಯ್ಕೆ ಆರಂಭಿಸಿದ್ದು, ಶೇ 80 ರಷ್ಟು ಹೊಸ ಮುಖಗಳಿಗೆ ಚುನಾವಣಾ ಸ್ಫರ್ಧೆಗೆ ಅವಕಾಶ ನೀಡಲು ಕಾಂಗ್ರೇಸ್ ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : ಸತ್ಯಮಂಗಳದಲ್ಲಿ ಶಿವಣ್ಣ: ಮಮ್ಮಿ ಲೋಹಿತ್ ನಿರ್ದೇಶನ-ಬೈರಾಗಿ ಕೃಷ್ಣ ಸಾರ್ಥಕ್ ನಿರ್ಮಾಣ
ಕಳೆದ ಬಾರಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಗೆಲುವು ಸಾಧಿಸಿದ್ದ 10 ಜನ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷ ಇದೀಗ ಹೊಸ ಮುಖಗಳಿಗೆ ಟಿಕೇಟ್ ನೀಡಲು ಮುಂದಾಗಿದೆ.
ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷವು ಗೋವಾದಲ್ಲಿ ರಣನೀತಿ ರೂಪಿಸಲು ಕಾಂಗ್ರೇಸ್ ಪಕ್ಷದ ವರಿಷ್ಠ ಚುನಾವಣಾ ನಿರೀಕ್ಷಕರನ್ನಾಗಿ ಪಿ.ಚಿದಂಬರಂ ರವರನ್ನು ನಿಯುಕ್ತಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಪಿ.ಚಿದಂಬರಂ ರವರು ಮುಂದಿನವಾರ ಗೋವಾಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೇಸ್ ಪಕ್ಷದ ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: ನಾಗರ ಪಂಚಮಿ ಆಚರಣೆ