Advertisement

ಓಯೋ ಮುಖ್ಯಸ್ಥನ ವೇತನ ಶೇ.250 ಹೆಚ್ಚಳ!

12:53 PM Sep 20, 2022 | Team Udayavani |

ನವದೆಹಲಿ: ಓಯೋ ಸಂಸ್ಥೆಯ ಮುಖ್ಯಸ್ಥ ರಿತೇಶ್‌ ಅಗರ್ವಾಲ್‌ ಅವರ ವೇತನ 2021ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2022ರ ಆರ್ಥಿಕ ವರ್ಷದಲ್ಲಿ ಶೇ.250 ಹೆಚ್ಚಾಗಿದೆ.

Advertisement

ಅವರಿಗೆ ಈ ವರ್ಷ ಬರೋಬ್ಬರಿ 5.6 ಕೋಟಿ ರೂ.ಗಳನ್ನು ವೇತನವಾಗಿ ನೀಡಲಾಗುತ್ತಿದೆ. ಅದು ಕಳೆದ ವರ್ಷ 1.6 ಕೋಟಿ ರೂ. ಆಗಿತ್ತು. ಅದಕ್ಕೂ ಹಿಂದೆ ಅಂದರೆ 2020ರಲ್ಲಿ 21.5 ಲಕ್ಷ ರೂ. ಆಗಿತ್ತು. ಓಯೋ ಸಂಸ್ಥೆ 2022ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ಸಿಬ್ಬಂದಿಯ ವೇತನ ಹಾಗೂ ಬೋನಸ್‌ ಹಣದಲ್ಲಿಯೂ ಇಳಿಕೆ ಮಾಡಿದೆ.

ಹಾಗಿದ್ದರೂ ರಿತೇಶ್‌ ಅವರ ಸಂಬಳವನ್ನು ಮಾತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next