Advertisement

ದಿವಾಳಿ ಆದೇಶದ ವಿರುದ್ಧ ಓಯೋ ಮೇಲ್ಮನವಿ?

10:21 PM Apr 07, 2021 | Team Udayavani |

ನವದೆಹಲಿ: ಹೋಟೆಲ್‌ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಓಯೋ ಸಂಸ್ಥೆಯ ಅಂಗಸಂಸ್ಥೆಯಾದ ಓಯೋ ಹೋಟೆಲ್ಸ್‌ ಆ್ಯಂಡ್‌ ಹೋಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಾಧೀಕರಣ (ಎನ್‌ಸಿಎಲ್‌ಟಿ), ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಆದೇಶ ಹೊರಡಿಸಿದೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಓಯೋ ಕಂಪನಿ, ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದೆ. ಮಾ. 30ರಂದು ಎನ್‌ಸಿಎಲ್‌ಟಿಯಿಂದ ಈ ಆದೇಶ ಹೊರಬಿದ್ದಿದ್ದು, ಆದೇಶದ ಬಗ್ಗೆ ತಕರಾರು ಅರ್ಜಿಗಳನ್ನು ಸಲ್ಲಿಸಲು ಓಯೋ ಸಮೂಹ ಸಂಸ್ಥೆಗೆ ಏ. 15ರವರೆಗೆ ಗಡುವು ನೀಡಲಾಗಿತ್ತು.

ಇದನ್ನೂ ಓದಿ :ಸುಬ್ರಹ್ಮಣ್ಯ : ಕೆದಿಲ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ಆತಂಕದಲ್ಲಿ ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next