Advertisement

ಆಕ್ಸಿಜನ್‌ ಸಾಂದ್ರಕ ಕಾನ್ಸಂಟ್ರೇಟರ್‌ ಖರೀದಿಗೆ ಕ್ರಮ

08:38 PM May 08, 2021 | Team Udayavani |

ತುಮಕೂರು: ಕೋವಿಡ್‌ 2ನೇ ಅಲೆ ಹೆಚ್ಚುತ್ತಿರುವಹಿನ್ನೆಲೆ ಸೋಂಕಿತರಿಗೆ ಆಮ್ಲ ಜನಕಕೊರತೆಯಾಗದಂತೆ ಪೂರೈಕೆ ವ್ಯವಸ್ಥೆ ಮಾಡುವನಿಟ್ಟಿನಲ್ಲಿ ಜಿಲ್ಲೆಯ ಕ್ವಾರಿ-ಕ್ರಷರ್‌, ಸಣ್ಣ ಮತ್ತುಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಧನಸಹಾಯದ ನೆರವು ಪಡೆದು, ಅಗತ್ಯವಿರುವಆಮ್ಲಜನಕ ಸಾಂದ್ರಕ ಕಾನ Õಂಟ್ರೇಟರ್‌ ಖರೀದಿಮಾಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯಸ್ಟೋನ್‌ ಕ್ರಷರ್‌ ಮಾಲೀಕರು, ಕ್ವಾರಿ ಮಾಲೀಕರು,ವಸಂತನರಸಾಪುರ ಕೈಗಾರಿ ಕೋದ್ಯಮಿಗಳ ಸಂಘ,ಗ್ರಾನೈಟ್‌ ಅಸೋಶಿ ಯೇಷನ್‌, ಜಿಲ್ಲಾ ಇಂಡ್‌ಸ್ಟ್ರೀಸ್‌ಅಸೋಶಿ ಯೇಷನ್‌ ಸೇರಿದಂತೆ ಜಿಲ್ಲೆಯ ಸಣ್ಣ ಮತ್ತುಮಧ್ಯಮ ವರ್ಗದ ಕೈಗಾರಿ ಕೋದ್ಯಮಿ ಗಳೊಂದಿಗೆಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಅಗತ್ಯವಿರುವಆಮ್ಲಜನಕ ಕಾನ್ಸಂ ಟ್ರೇಟರ್‌ ಖರೀದಿಗೆ ಹೆಚ್ಚು ಧನಸಹಾಯ ಮಾಡುವಂತೆ ಮನವಿ ಮಾಡಿದರು.

ಕೋವಿಡ್‌ ಸೋಂಕಿತರಿಗೆ ಶೇ. 80ರಷ್ಟುಅಮ್ಲಜನಕದ ಕೊರತೆ ಕಂಡುಬರುತ್ತಿದೆ. ಆದ್ದರಿಂದಆಮ್ಲಜನಕ ಅನಿವಾರ್ಯವಿರುವ ಕಾರಣಆಮ್ಲಜನಕದ ಸಾಂದ್ರಕಗಳ ಖರೀದಿಗೆ ತಾವೆಲ್ಲರೂನೆರವು ನೀಡಬೇಕು. ಆರೋಗ್ಯ ತುರ್ತು ಪರಿಸ್ಥಿತಿಸಂದರ್ಭದಲ್ಲಿ ಉದಾರ ಮನೋಭಾವನೆಯಿಂದದಾನದ ರೂಪವಾಗಿ ಹಣದ ಸಹಾಯಾಸ್ತಮಾಡಬೇಕು. ನಿಮ್ಮಗಳ ನೆರವಿನಿಂದ ಆಮ್ಲಜನಕದಸಾಂದ್ರಕ ಖರೀದಿ ಮಾಡಿ ಪ್ರತಿ ತಾಲೂಕುಗಳಲ್ಲಿ ಹತ್ತುಆಮ್ಲಜನಕದ ಸಾಂದ್ರಕಗಳು ಇರುವಂತೆಕಾಯ್ದುಕೊಳ್ಳಲಾಗುವುದು ಎಂದರು.

ಲಾಕ್‌ಡೌನ್‌ ಮಾಡುವುದು ಸೂಕ್ತ: ಜನತಾ ಕರ್ಫ್ಯೂಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಮಾಜಿಕ ಅಂತರಕಾಪಾಡದೆ, ಮಾಸ್ಕ್ ಧರಿಸದೆ ಇರುವುದು ಎಲ್ಲೆಡೆಕಂಡು ಬರುತ್ತಿರುವುದರಿಂದ ರಾಜ್ಯ ಸರ್ಕಾರಕೈಗೊಂಡಿರುವ ಲಾಕ್‌ಡೌನ್‌ ಸೂಕ್ತವಾಗಿದೆ. ಪರಿಸ್ಥಿತಿ ಕೈಮೀರುತ್ತಿದೆ. ಆದ್ದರಿಂದ ಲಾಕ್‌ಡೌನ್‌ಅನಿವಾರ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಡ್‌ ಬ್ಲಾಕಿಂಗ್‌ದಂಧೆ ನಡೆಯುತ್ತಿಲ್ಲ. ವಾರ್‌ರೂಂ ಮೂಲಕ ಸೋಂಕಿತರಿಗೆ ಸಮಸ್ಯೆಯಾಗದಂತೆ ಹಾಸಿಗೆ ವ್ಯವಸ್ಥೆಮಾಡಲಾಗುತ್ತಿದೆ. ತಾಲೂಕುಗಳಿಂದ ಬರುವ ಸೋಂಕಿತರಿಗೆ ಗಂಭೀರತೆ ಆಧಾರದ ಮೇಲೆ ಹಾಸಿಗೆ ವ್ಯವಸ್ಥೆಮಾಡಲಾಗುವುದು. ಖಾಸಗಿ ಆಸ್ಪತ್ರೆಗಳ ಮೇಲೆಯೂನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಆಮ್ಲಜನಕದ ಅವಶ್ಯಕತೆಯಿದೆ: ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಮಾತನಾಡಿ, ಕೈಗಾರಿಕೋ ದ್ಯ ಮಗಳುಹೆಚ್ಚು ನೆರವು ನೀಡಿದಷ್ಟೂ ಹೆಚ್ಚು ಸೋಂಕಿತರಿಗೆನೆರವಾಗಲಿದೆ. ಹೋಂ ಐಸೋ ಲೇಶನ್‌ ನಲ್ಲಿರುವವರಿಗೂ ಆಮ್ಲ ಜನಕದ ಅವಶ್ಯಕತೆಯಿದೆ. ಅಲ್ಲದೆ,ಕೋವಿಡ್‌ ನೆಗೆಟಿವ್‌ ಇದ್ದು ಶ್ವಾಸಕೋಶದ ಸಮಸ್ಯೆಗಳಿರುವವರಿಗೆ ಆಮ್ಲಜನಕದ ಅವಶ್ಯಕತೆಯಿದೆ. ಹಾಗಾಗಿಹೆಚ್ಚು ನೆರವಿನ ಹಸ್ತ ಬೇಕಿದೆ ಎಂದು ಮನವಿಮಾಡಿದರು.

ಸಂಸದ ಜಿ.ಎಸ್‌. ಬಸವರಾಜ್‌, ಮಾಜಿ ಸಚಿವಸೊಗಡು ಎಸ್‌.ಶಿವಣ್ಣ, ಟೂಡಾ ಅಧ್ಯಕ್ಷ ನಾಗಣ್ಣ,ತುಮಕೂರು ಉಪ ವಿಭಾಗಾಧಿಕಾರಿ ಅಜಯ್‌,ಜಿಲ್ಲಾ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ಪಿ.ನಾಗೇಶ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿನಿರ್ದೇಶಕರು ಸೇರಿದಂತೆ ಜಿಲೆ Éಯ ಸ್ಟೋನ್‌ ಕ್ರಷರ್‌,ಕ್ವಾರಿ ಮಾಲೀಕರು, ವಸಂತ ನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳು, ಗ್ರಾನೈಟ್‌ಅಸೋಶಿಯೇಷನ್‌ ಪದಾಧಿಕಾರಿ ಗಳು, ಜಿಲ್ಲಾಇಂಡ್‌ಸ್ಟ್ರೀಸ್‌ ಅಸೋಶಿಯೇಷನ್‌ ಪದಾಧಿಕಾರಿಗಳುಹಾಗೂ ಇತರರು ಇದ ªರು.

Advertisement

Udayavani is now on Telegram. Click here to join our channel and stay updated with the latest news.

Next