Advertisement
ರಾಜ್ಯಾದ್ಯಂತ ಸುದ್ದಿ: ಮೇ 2 ರ ರಾತ್ರಿ ಆಕ್ಸಿಜನ್ ಸ್ಥಗಿತಗೊಂಡು 10 ರೋಗಿಗಳು ಮೃತಪಟ್ಟಿದ್ದರು. ಅಂದು ಬೆಳಗ್ಗೆಯಿಂದ ಕೋವಿಡ್ ಚಿಕಿತ್ಸೆ ಫಲಕಾರಿಯಾಗದೇ 14 ರೋಗಿಗಳುಸಾವಿಗೀಡಾಗಿದ್ದರು. ಎರಡೂ ಸೇರಿ 24 ರೋಗಿಗಳು ಮೃತ ಪಟ್ಟ ಕಾರಣ, ಈ ಘಟನೆ ರಾಜ್ಯ ಮಾತ್ರವಲ್ಲದೇ ದೇಶದ ಗಮನ ಸೆಳೆದಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಕೂಗು ರಾಜ್ಯಾದ್ಯಂತ ಎದ್ದಿತ್ತು.
Related Articles
Advertisement
10 ಮಂದಿ ಸೋಂಕಿತರು ಮೃತ :
ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 32 ವೆಂಟಿಲೇಟರ್ ಸೇರಿ ಒಟ್ಟು 110 ಆಕ್ಸಿಜನೇಟೆಡ್ ಬೆಡ್‌ಗಳಿವೆ. ಮೇ 2 ರ ರಾತ್ರಿ ಆಕ್ಸಿಜನ್ ಸಂಗ್ರಹ ಮುಗಿಯುವ ಸೂಚನೆಗಳಿದ್ದವು. ಮೈಸೂರಿನ ಖಾಸಗಿ ಆಮ್ಲಜನಕ ಪೂರೈಕೆ ಘಟಕಗಳಿಂದ ಚಾಮರಾಜನಗರಕ್ಕೆ ಆಮ್ಲಜನಕ ಸರಬರಾಜು ಆಗಬೇಕಿತ್ತು. ಇದನ್ನು ಆರೋಗ್ಯಾಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ, ಜಿಲ್ಲಾಡಳಿತ ಮೈಸೂರಿನಿಂದ ಆಮ್ಲಜನಕ ತರಿಸುವ ಪ್ರಯತ್ನ ನಡೆಸಲಿಲ್ಲ. ಇರುವ ಆಮ್ಲಜನಕವನ್ನೇ ಮೇ 3 ರ ಬೆಳಗ್ಗೆವರೆಗೂ ಹೇಗಾದರೂ ಹೊಂದಿಸುವಂತೆ ಸೂಚನೆ ಬಂದಿತ್ತು ಎಂದು ಖಚಿತ ಮೂಲಗಳು ತಿಳಿಸಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಂಗಾಲಾದ ಜಿಲ್ಲಾ ಆಸ್ಪತ್ರೆ ಆಡಳಿತದ ವೈದ್ಯಾಧಿಕಾರಿಗಳು, ಆಕ್ಸಿಜನ್ ಅನ್ನು ಹೇಗಾದರೂ ಮೈಸೂರಿನಿಂದ ತರಿಸುವ ಯತ್ನ ನಡೆಸಿದ್ದರು. ಆದರೆ ಆ ಯತ್ನ ಫಲ ನೀಡಲಿಲ್ಲ.
11ರ ವೇಳೆ ಪತ್ರಕರ್ತರು ಮೈಸೂರಿನ ಸಂಸದ ಪ್ರತಾಪ ಸಿಂಹ ಅವರಿಗೆ ಕರೆ ಮಾಡಿ, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಮುಗಿಯುತ್ತಿದ್ದು ಕ್ಷಿಪ್ರವಾಗಿ ಆಮ್ಲಜನಕ ಕಳುಹಿಸಿಕೊಡಬೇಕಂದು ಮನವಿ ಮಾಡಿದ ಪರಿಣಾಮ 40 ಆಮ್ಲಜನಕ ಸಿಲಿಂಡರ್ ಅನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಅಂದು ರಾತ್ರಿ 11.15ರ ಸುಮಾರಿಗೆಜಿಲ್ಲಾ ಕೋವಿಡ್ ಆಸ್ಪತ್ರೆ ವಾರ್ಡಿನಲ್ಲಿದ್ದ ಆಮ್ಲಜನಕ ಅವಲಂಬಿತ ರೋಗಿಗಳಿಗೆ ಆಮ್ಲಜನಕ ಸರಬರಾಜು ಸ್ಥಗಿತಗೊಂಡಿತು. ಈ ವೇಳೆ ಮೂವರು ರೋಗಿಗಳು ತಕ್ಷಣ ಮೃತಪಟ್ಟರು. ಬೆಳಗಿನ ಜಾವ 2.15ರ ಸಮಯದಲ್ಲಿ ಮೈಸೂರಿನಿಂದ 40 ಸಿಲಿಂಡರ್ ಬಂದವು. ಅವನ್ನು ಅಳವಡಿಸಿ ರೋಗಿಗಳಿಗೆ ಆಮ್ಲಜನಕ ಪೂರೈಸಲಾಯಿತು. ತದ ನಂತರವೂ ಆಮ್ಲಜನಕ ಕಡಿತದ ದುಷ್ಪರಿಣಾಮದಿಂದ 7 ರೋಗಿಗಳು ಮೃತಪಟ್ಟರು.
ಆಕ್ಸಿಜನ್ ಪೂರೈಕೆ ಸರ್ಕಾರದ ಹೊಣೆ. ಅದನ್ನು ಸಕಾಲದಲ್ಲಿ ಪೂರೈಸಬೇಕಾಗಿರು ವುದು ಜಿಲ್ಲಾಡಳಿತ. ತ್ವರಿತಗತಿಯಲ್ಲಿ ತನಿಖೆನಡೆಯಬೇಕು. ಈಗಾಗಲೇ ಈ ಘಟನೆ ಬಗ್ಗೆತೀವ್ರ ಖಂಡನೆಗಳು ವ್ಯಕ್ತವಾಗಿವೆ. ತಪ್ಪಿತಸ್ಥರವಿರುದ್ಧ ಕ್ರಮಕೈಗೊಳ್ಳಬೇಕು.–ಆರ್.ಧ್ರುವನಾರಾಯಣ,ಕೆಪಿಸಿಸಿ, ಕಾರ್ಯಾಧ್ಯಕ್ಷ
ಕೆ.ಎಸ್.ಬನಶಂಕರ ಆರಾಧ್ಯ