ಮಂಡ್ಯ: ಮಿಮ್ಸ್ ಸೇರಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ತೊಂದರೆಯಾಗದಂತೆ ಆಕ್ಸಿಜನ್ ವ್ಯವಸ್ಥೆಮಾಡಲಾಗಿದೆ. ನಮ್ಮ ಸಚಿವರು ಖುದ್ದು ಆಕ್ಸಿಜನ್‌ಘಟಕಕ್ಕೆ ಭೇಟಿ ನೀಡಿ ಆಕ್ಸಿಜನ್ ತರುವಲ್ಲಿಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ .ಜೆ.ವಿಜಯಕುಮಾರ್ ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡಅವರೊಂದಿಗೆ ಮಿಮ್ಸ್‌ಗೆ ಭೇಟಿ ನೀಡಿ ಪರಿಶೀಲಿಸಿ,ನಿರ್ದೇಶಕರಿಂದ ಮಾಹಿತಿ ಪಡೆದ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದರು.ಚಾಮರಾಜನಗರದಲ್ಲಿ ಆಕ್ಸಿಜನ್‌ನಿಂದ ಉಂಟಾದಘಟನೆಯಿಂದ ಎಚ್ಚೆತ್ತ ಸಚಿವರು, ಮೈಸೂರಿನ ಪರಕಿಆಕ್ಸಿಜನ್ ಕಾರ್ಖಾನೆಗೆ ಭೇಟಿ ನೀಡಿ ಮಂಡ್ಯ ಜಿಲ್ಲೆಗೆಆಗುವಷ್ಟು ಆಕ್ಸಿಜನ್ ಸರಬರಾಜು ಮಾಡುವಂತೆಸೂಚನೆ ನೀಡಲಾಗಿದೆ.
ರಾತ್ರಿಯೇ ಜಿಲ್ಲೆಗೆ 200ಜಂಬೋ ಸಿಲಿಂಡರ್ ಆಕ್ಸಿಜನ್ ತರಿಸಿಕೊಳ್ಳಲಾಗಿದೆಎಂದು ವಿವರಿಸಿದರು.ನಿತ್ಯ ಜಿಲ್ಲೆಗೆ ಆಕ್ಸಿಜನ್ ಸರಬರಾಜಾಗುವಂತೆನೋಡಿಕೊಳ್ಳಲು ತಹಶೀಲ್ದಾರರನ್ನುನಿಯೋಜಿಸಲಾಗಿದೆ. ಆಕ್ಸಿಜನ್ ಪೋಲಾಗದಂತೆಎಚ್ಚರ ವಹಿಸಿ ರೋಗಿಗಳಿಗೆ ಯಾವುದೇತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದುಸಲಹೆ ನೀಡಿದರು.
ಮಿಮ್ಸ್ ಅನ್ನು ಕೋವಿಡ್‌ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲು ಆರೋಗ್ಯಸಚಿವ ಡಾ.ಕೆ.ಸುಧಾಕರ್ ಅವರು ಸೂಚಿಸಿದ್ದು, ಶೀಘ್ರಸೌಲಭ್ಯ ಮಾಡಿಕೊಳ್ಳಬೇಕು. ಹೆಚ್ಚುವರಿ ಹಾಸಿಗೆಅಳವಡಿಸಬೇಕು ಎಂದು ಡಾ. ಎಂ.ಆರ್.ಹರೀಶ್‌ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.ಈಗಾಗಲೇ ಸಚಿವರು ಸಹಾಯವಾಣಿಸ್ಥಾಪಿಸುವಂತೆ ಸೂಚನೆ ನೀಡಿದ್ದು, ಸಹಾಯವಾಣಿಗೆಬರುವ ಕರೆಗಳನ್ನು ಆಧರಿಸಿ ರೋಗಿಗಳಿಗೆ ಅಗತ್ಯವೈದ್ಯಕೀಯ ಸೇವೆ ಒದಗಿಸಬೇಕು.
ಗಂಭೀರಪರಿಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ಯಾವುದೇತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದುಸೂಚಿಸಿರುವುದಾಗಿ ತಿಳಿಸಿದರು.ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚುವರಿಕರ್ತವ್ಯ ನಿರ್ವಹಿಸಲು ಮಿಮ್ಸ್‌ನ ವೈದ್ಯಾ ಧಿಕಾರಿಗಳು,ವಿಭಾಗಗಳ ಮುಖ್ಯಸ್ಥರನ್ನು ನಿಯೋಜಿಸಬೇಕು.ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೇವೆಗೆತೊಂದರೆಯಾದಲ್ಲಿ ತಕ್ಷಣ ಮಿಮ್ಸ್ ವೈದ್ಯರನ್ನುಕಳುಹಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕಪ್ರಯತ್ನ ಮಾಡಬೇಕು ಎಂದು ಮಿಮ್ಸ್ ನಿರ್ದೇಶಕಡಾ.ಹರೀಶ್‌ರಿಗೆ ಸಲಹೆ ನೀಡಲಾಗಿದೆ ಎಂದರು.
ಹೆಚ್ಚುವರಿ ಆಕ್ಸಿಜನ್ ಬೆಡ್ ಪರಿಶೀಲಿಸಿದ ಸಚಿವ
ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿ ಆಕ್ಸಿಜನ್ ಬೆಡ್‌ಗಳ ವಾರ್ಡ್ ಸಿದ್ದಗೊಂಡಿದ್ದು, ಮಂಗಳವಾರಜಿಲ್ಲಾಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಜಿಲಾಧಿಕಾರಿ ಎಸ್.ಅಶ್ವಥಿ ಭೇಟಿ ನೀಡಿ ಹೆಚ್ಚುವರಿ ಆಕ್ಸಿಜನ್ ಬೆಡ್‌ಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆ ಆವರಣದ ಕೌಂಟರ್ ವಿಭಾಗದಲ್ಲಿಹೊರ ರೋಗಿಗಳು ಸಾಮಾಜಿಕ ಅಂತರ ಮತ್ತು ಮಾಸ್ಕ್ಧರಿಸುವಂತೆ ನೋಡಿಕೊಳ್ಳಬೇಕು ಎಂದುಅ ಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಎಚ್.ಪಿ.ಮಂಚೇಗೌಡ,ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್, ಉಪವಿಭಾಗಾ ಧಿಕಾರಿ ಆರ್.ಐಶ್ವರ್ಯ, ಬಿಜೆಪಿ ಜಿಲ್ಲಾಧ್ಯಕ್ಷಕೆ.ಜೆ.ವಿಜಯಕುಮಾರ್ ಮತ್ತಿತರರಿದ್ದರು.