Advertisement

5 ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್‌ ಉತ್ಪಾದನಾ ಘಟಕ

07:16 PM Jun 17, 2021 | Team Udayavani |

ಕೋಲಾರ: ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆಯನ್ನುಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಸಿದ್ಧತೆ ನಡೆಸಿದ್ದು, ಜಿಲ್ಲೆಯ ಎಲ್ಲಾ ತಾಲೂಕು ಸರ್ಕಾರಿಆಸ್ಪತ್ರೆಗಳಿಗೆ ಆಮ್ಲಜನಕ ಘಟಕ ಮಂಜೂರುಮಾಡಿಸುವ ಪ್ರಯತ್ನ ಫ‌ಲಕೊಟ್ಟಿದೆ.

Advertisement

ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಪ್ರಯತ್ನದಿಂದಬಹುರಾಷ್ಟ್ರೀಯ ಕಂಪನಿಗಳು ಹಾಗೂ ರಾಷ್ಟ್ರೀಯಕಂಪನಿಗಳು ತಮ್ಮ ಸಾಮುದಾಯಿಕ ಜವಾಬ್ದಾರಿಕಾರ್ಯಕ್ರಮ (ಸಿಎಲ್‌ಆರ್‌)ನಿಧಿ ಮೂಲಕ ಜಿಲ್ಲೆಗೆ 5ಆಮ್ಲಜನಕ ಘಟಕಗಳನ್ನು ನೀಡಲು ಒಪ್ಪಿಗೆ ನೀಡಿವೆ.

ಕೊರತೆಯಿತ್ತು: ಕೋಲಾರ ಜಿಲ್ಲಾಧಿಕಾರಿಡಾ.ಆರ್‌.ಸೆಲ್ವಮಣಿ ಜಿಲ್ಲಾಧಿಕಾರಿಯಾಗಿಆಗಮಿಸಿದ ಕೆಲವೇ ವಾರಗಳಲ್ಲಿಕೊರೊನಾ 2ನೇ ಅಲೆ ಕೋಲಾರಜಿಲ್ಲೆಯನ್ನು ಅಪ್ಪಳಿಸಿತ್ತು.ಸೋಂಕಿತರಿಗೆ ಬೆಡ್‌ ಕೊರತೆ,ಆಮ್ಲಜನಕ, ಕೋವಿಡ್‌ ಕೇರ್‌ಸೆಂಟರ್‌ಗಳ ಕೊರತೆ ಎದುರಾಗಿತ್ತು.ಇದೇ ಅವಧಿಯಲ್ಲಿ ಕೋಲಾರ ಜಿಲ್ಲಾಸ್ಪತ್ರೆಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಆಮ್ಲಜನಕಕೊರತೆಯಿಂದ ಸಾವು ಸಂಭವಿಸಿದ್ದವು.

ಈ ರೀತಿಯಸಾವು ರಾಜ್ಯದಲ್ಲಿ ದಾಖ ಲಾದ ಮೊದಲ ಆಮ್ಲಜನಕಕೊರತೆ ಸಾವುಗಳಾಗಿದ್ದವು.ಸೋಂಕಿತರಿಗೆ ಅಗತ್ಯ ಸೌಲಭ್ಯ, ಆಮ್ಲಜನಕಘಟಕಗಳನ್ನು ತ್ವರಿತಗತಿಯಲ್ಲಿ ಅಳವಡಿಸುವುದು,ಅಗತ್ಯಕ್ಕೆ ತಕ್ಕಷ್ಟು ಕೋವಿಡ್‌ ಕೇರ್‌ ಸೆಂಟರ್‌ತೆರೆಯುವುದು, ಹೀಗೆ ಜಿಲ್ಲಾಡಳಿತದ ಮುಂದೆಸವಾಲುಗಳು ಮುಖಮಾಡಿನಿಂತಿದ್ದವು.ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಈಸವಾಲನ್ನು ಸಮರ್ಥವಾಗಿಯೇ ಎದುರಿಸಿದ್ದಲ್ಲದೆ, ತ್ವರಿತಗತಿಯಲ್ಲಿಯೇ ಬೆಡ್‌ಗಳ ಸಂಖ್ಯೆ ಹೆಚ್ಚಳ,ಲಭ್ಯ ಸಂಪನ್ಮೂಲಗಳ ಜತೆಯಲ್ಲಿಯೇಆಮ್ಲಜನಕ ಕೊರತೆಯಾಗದಂತೆಎಚ್ಚರಿಕೆ, ಕೋವಿಡ್‌ ಕೇರ್‌ ಕೇಂದ್ರಗಳನ್ನುಪ್ರತಿ ತಾಲೂಕಿಗೆ ಎರಡರಂತೆ ಆರಂಭಿಸಿದರು.ಪ್ರತಿ ಗ್ರಾಮದಲ್ಲಿ ಕೊರೊನಾ ನಿರ್ವಹಣೆ ಕಾರ್ಯಪಡೆ, ಪ್ರತಿ ಗ್ರಾಪಂನಲ್ಲೂ ಗ್ರಾಪಂ ಕಾರ್ಯಪಡೆ ರಚನೆ.ಹೀಗೆ ಯುದ್ಧದೋಪಾದಿಯಲ್ಲಿ ಕೋವಿಡ್‌ ನಿಯಂತ್ರಣಕಾರ್ಯಕ್ರಮಗಳನ್ನು ಚುರುಕುಗೊಳಿಸಿದ್ದರು.

ಈಗ ಐದು ಘಟಕ ಮಂಜೂರು: ಜಿಲ್ಲೆಯಲ್ಲಿ ಸದ್ಯಕ್ಕೆಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಕೊರೊನಾಪಾಸಿಟಿವಿಟಿ ದರ ಶೇ.5 ಕ್ಕಿಂತಲೂ ಕಡಿಮೆ ಇದೆ. ಇಡೀಹಸಿರು ಜಿಲ್ಲೆಯಾಗುವತ್ತ ದಾಪುಗಾಲು ಹಾಕುತ್ತಿದೆ.ಆದರೂ, ಜಿಲ್ಲಾಧಿಕಾರಿ 3ನೇ ಅಲೆಯಂತ ಅಪಾಯವನ್ನು ಸಮರ್ಥವಾಗಿ ಎದುರಿಸುವಂತಾಗ ಬೇಕು ಎಂಬ ಆಶಯದಿಂದ ಕಾರ್ಯೋನ್ಮುಖವಾಗಿದ್ದಾರೆ.ಇವರ ಪ್ರಯತ್ನದ ಫ‌ಲದಿಂದಲೇ ಕೆಲವುಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳುತಮ್ಮ ಸಮುದಾಯಿಕ ಜವಾಬ್ದಾರಿ ನಿಭಾಯಿಸುವ ಕಾರ್ಯಕ್ರಮದಡಿ ಕೋಲಾರ ಜಿಲ್ಲೆಗೆ 5 ಆಮ್ಲಜನಕಉತ್ಪಾದನಾ ಘಟಕ ಮಂಜೂರು ಮಾಡಿವೆ. ಕೆಜಿಎಫ್ನಲ್ಲಿ ಈಗಾಗಲೇ ಇಸ್ರೇಲ್‌ನಿಂದ ಬಂದಿರುವ ಆಮ್ಲಜನಕಘಟಕ ಅನುಷ್ಠಾನಗೊಳಿಸಿರುವುದರಿಂದ ಈಗ ಜಿಲ್ಲೆಗೆಕಂಪನಿಗಳಿಂದ ಬರುತ್ತಿರುವ ಆಮ್ಲಜನಕ ಘಟಕಗಳನ್ನುಕೋಲಾರ ಜಿಲ್ಲಾಸ್ಪತ್ರೆ ಸೇರಿದಂತೆ ಇನ್ನುಳಿದ 5ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

Advertisement

ತಾಲೂಕು ಆಸ್ಪತ್ರೆಗೆ ಘಟಕ: ಏರ್‌ಪೋರ್ಟ್‌ ಅಥಾರಿ ಟೀಸ್‌ ನೀಡುತ್ತಿರುವ ಆಮ್ಲಜನಕ ಘಟಕಗಳನ್ನುಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಲಾಗುತ್ತಿದೆ. ಕೋಲಾರ ತಾಲೂಕಿನ ನರಸಾಪುರದಲ್ಲಿಯೇ ಐ ಫೋನ್‌ ತಯಾರಿಸುತ್ತಿರುವ ವಿಸ್ಟ್ರಾನ್‌ಕಂಪನಿ ನೀಡುತ್ತಿರುವ ಆಮ್ಲಜನಕ ಘಟಕವನ್ನುಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನಮಾಡಲು ನಿರ್ಧರಿಸಲಾಗಿದೆ.

ಹಾಗೆಯೇ ಟೆಟ್ರಾಕಂಪನಿ ನೀಡುತ್ತಿರುವ ಆಮ್ಲಜನಕ ಘಟಕವನ್ನುಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಸ್ವಯಂ ಸೇವಾಸಂಸ್ಥೆ ಯೊಂದು ನೀಡುತ್ತಿರುವ ಆಮ್ಲಜನಕ ಘಟಕವನ್ನು ಬಂಗಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಐದು ಘಟಕಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸುವಕಾರ್ಯ ಪ್ರಗತಿ ಯಲ್ಲಿದ್ದು ಶೀಘ್ರವೇಕಾರ್ಯೋನ್ಮುಖವಾಗಲಿವೆ. ಪ್ರತಿ ಆಮ್ಲಜನಕಘಟಕವೂ 100 ಬೆಡ್‌ಗಳಿಗೆ ಆಮ್ಲಜನಕ ಪೂರೈಸುವಸಾಮರ್ಥ್ಯವನ್ನು ಹೊಂದಿರುವುದರಿಂದ ಈ ಎಲ್ಲಾಘಟಕಗಳಿಂದ ಕೋಲಾರ ಜಿಲ್ಲೆ ಆಮ್ಲಜನಕಪೂರೈಕೆಯಲ್ಲಿ ಸ್ವಾವಲಂಬನೆ ಕಾಣಲಿದೆಯೆಂದುನಿರೀಕ್ಷಿಸಲಾಗುತ್ತಿದೆ.
ವಿವಿಧ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯಕಂಪನಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಿಎಸ್‌ಆರ್‌ ನಿಧಿಯ ನೆರವಿನಿಂದ ಕೋಲಾರ ಎಸ್‌ಎನ್‌ಆರ್‌ಜಿಲ್ಲಾಸ್ಪತ್ರೆಯೂ ಸೇರಿದಂತೆ ಶ್ರೀನಿವಾಸಪುರ,ಮುಳಬಾಗಿಲು, ಮಾಲೂರು ಮತ್ತು ಬಂಗಾರಪೇಟೆತಾಲೂಕು ಸರ್ಕಾರಿ ಆಸ್ಪತ್ರೆಗಳು 100 ಬೆಡ್‌ಗಳಿಗೆಪೂರೈಕೆ ಮಾಡುವ ಆಮ್ಲಜನಕ ಘಟಕಗಳನ್ನುಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರವೇಜನರ ಸೇವೆಗೆ ಸಿಗಲಿದೆ ಎಂದು ಜಿಲ್ಲಾಧಿಕಾರಿಡಾ.ಆರ್‌.ಸೆಲ್ವಮಣಿ, ಜಿಲಾಧಿಕಾರಿ ತಿಳಿಸಿದರು.

ಕೆ.ಎಸ್‌.ಗಣೇಶ್

Advertisement

Udayavani is now on Telegram. Click here to join our channel and stay updated with the latest news.

Next