ಮಂಡ್ಯ: ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಆಸ್ಪತ್ರೆಗಳ ಪರಿಸ್ಥಿತಿ ಕೊಂಚ ಬದಲಾಗಿದೆ. ಕೊರೊನಾ ಸೋಂಕಿನಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾಂಟ್ ಹೊಂದಿದ ಜಿಲ್ಲೆಯಾಗಿದೆ .
ಬೆಡ್, ಐಸಿಯು, ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದರೆಇನ್ನೂ ಸಾಕಷ್ಟು ಸಮಸ್ಯೆಗಳಿದ್ದು, ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕಿದೆ.ಬೆಡ್‌ಗಳ ಸಂಖ್ಯೆ ಹೆಚ್ಚಳ: ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳಹೆಚ್ಚಿಸಲು ಕ್ರಮ ವಹಿಸಲಾಗಿದೆ. ಮೊದಲು3 ಐಸಿಯು ಬೆಡ್‌ಗಳಿ ದ್ದವು. ಈಗ ಅದನ್ನು10ಕ್ಕೇರಿಸಲು ಕ್ರಮ ವಹಿಸಲಾಗು ತ್ತಿದೆ. ಅಲ್ಲದೆ, ವೆಂಟಿಲೇಟರ್‌ಗಳನ್ನು ಅಳವಡಿಸಲುಕ್ರಮ ವಹಿಸಲಾಗುತ್ತಿದೆ.ಮಿಮ್ಸ್‌ಗೆ 100 ವೆಂಟಿಲೇಟರ್‌ಗಳಿಗೆ ಏರಿಕೆ:ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ 40 ವೆಂಟಿಲೇಟರ್‌ಗಳಿಂದ 100 ವೆಂಟಿಲೇಟರ್‌ಗಳಿಗೆ ಏರಿಕೆ ಮಾಡಲಾಗಿದೆ.
ಅದರ ಜತೆಗೆ 30ಮಕ್ಕಳ ಐಸಿಯು ಬೆಡ್ ಅಳವಡಿಸಲಾಗಿದೆ. ಜಿಲ್ಲೆಯಾಸ್ಪತ್ರೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ 400 ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಮತ್ತೆ 150 ಬೆಡ್‌ಗಳ ವಾರ್ಡ್‌ತೆರೆಯಲಾಗಿದೆ.ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ಗಳಲ್ಲಿಕೊರೊನಾ ಸೋಂಕಿತರ ಮೇಲೆ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಸೋಂಕಿತರಿಗೆ ಯಾವ ಸಂದರ್ಭದಲ್ಲಿ ಚಿಕಿತ್ಸೆ ನೀಡಬಹುದು.ಅಲ್ಲದೆ, ಸೋಂಕಿತರ ಆರೋಗ್ಯದ ಮೇಲೆ ನಿಗಾ ವಹಿಸಬಹುದಾಗಿದೆ.
ಆಕ್ಸಿಜನ್ ಉತ್ಪಾದನಾ ಪ್ಲಾಂಟ್‌ಗಳ ನಿರ್ಮಾಣ: ಮಂಡ್ಯ ಮಿಮ್ಸ್ ಸೇರಿದಂತೆಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡ ಲಾಗಿದೆ.2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಅನು ಭವಿಸಿದ ಹಿನ್ನೆಲೆಯಲ್ಲಿ ಮುಂದೆ ಯಾವುದೇರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಿಮ್ಸ್‌ನಲ್ಲಿ 2 ಸೇರಿದಂತೆಎಲ್ಲ ತಾಲೂಕು ಆಸ್ಪತ್ರೆ ಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದೆ.
ವೈದ್ಯಕೀಯ ಹುದ್ದೆಗಳ ಭರ್ತಿ: ಜಿಲ್ಲೆಯಲ್ಲಿ ಖಾಲಿ ಇದ್ದ ಎಲ್ಲ ವೈದ್ಯಕೀಯಹುದ್ದೆಗಳನ್ನು ಭರ್ತಿ ಮಾಡ ಲಾಗಿದೆ. ವೈದ್ಯರು, ದಾದಿಯರು, ಡಿ ಗ್ರೂಪ್ ನೌಕ ರರು,ಸಿಬ್ಬಂದಿಗಳು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್‌ಗಳನ್ನು ಗುತ್ತಿಗೆ ಆಧಾರದ ಮೇಲೆನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ವೈದ್ಯಕೀಯ ಸಿಬ್ಬಂದಿಗಳ ಕೊರತೆಇಲ್ಲದಂತಾಗಿದೆ.
ವೈದ್ಯಕೀಯ ಪರಿಕರಗಳ ಸಂಗ್ರಹ: ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ವೈದ್ಯಕೀಯಪರಿಕರಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಮಂದಿದಾನಿಗಳು, ಸಂಘ-ಸಂಸ್ಥೆಗಳು ಕೊರೊನಾ ಸೋಂಕಿನ ಚಿಕಿತ್ಸೆಗೆ ಬೇಕಾದ ಆಕ್ಸಿಜನ್‌ಕಾನ್ಸೆಂಟ್ರೇಟರ್, ಆಕ್ಸಿಜನ್ ಸಿಲಿಂಡರ್‌ಗಳು, ಮಾಸ್ಕ್ಗಳು, ಸ್ಯಾನಿಟೈಸರ್ ಸೇರಿದಂತೆವಿವಿಧ ಚಿಕಿತ್ಸಾ ಪರಿಕರಗಳನ್ನು ನೀಡಿದ್ದಾರೆ.
ಎಚ್.ಶಿವರಾಜು