Advertisement

“ಆಕ್ಸಿಜನ್‌ ಘಟಕ ಅಳವಡಿಕೆಗೆ ಕ್ರಮ’: ಸಚಿವ ಡಾ|ಕೆ. ಸುಧಾಕರ್‌

12:25 AM Aug 19, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಕೃತಕ ಆಕ್ಸಿಜನ್‌ ಬೇಡಿಕೆ ಐದು ಪಟ್ಟು ಹೆಚ್ಚಿದ್ದು ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಘಟಕಗಳನ್ನು ಅಳವಡಿಸಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು ಕೋವಿಡ್ ಸೋಂಕಿನಿಂದಾಗಿ ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಕೃತಕ ಆಕ್ಸಿಜನ್‌ ಬೇಡಿಕೆ ಹೆಚ್ಚಾಗಿದೆ. ಮುಂಜಾಗ್ರತ ಕ್ರಮವಾಗಿ ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜು ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸಾಮರ್ಥ್ಯ ನೋಡಿಕೊಂಡು ಲಿಕ್ವಿಟ್‌ ಆಕ್ಸಿಜನ್‌ ಯುನಿಟ್‌ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಆಕ್ಸಿಜನ್‌ ಪ್ಲ್ರಾಂಟ್‌ಗಳ ಕೊರತೆ ಇರುವು ದನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತರಲಾಗಿದೆ. ಗುಜರಾತ್‌ನಲ್ಲಿ ಹೆಚ್ಚು ಆಕ್ಸಿಜನ್‌ ಪ್ಲ್ರಾಂಟ್‌ಗಳಿವೆ. ಅವರ ಸಹಕಾರ ಪಡೆದು ರಾಜ್ಯದ ಸರಕಾರಿ ಆಸ್ಪತ್ರೆಗಳ ಸಾಮರ್ಥ್ಯ ನೋಡಿಕೊಂಡು ಅವುಗಳಲ್ಲಿ ಹೊಸ ಆಕ್ಸಿಜನ್‌ ಯೂನಿಟ್‌ಗಳನ್ನು ಅಳವಡಿಸಲು ಚಿಂತಿಸಲಾಗಿದೆ ಎಂದರು.

ಸದ್ಯ ರಾಜ್ಯದಲ್ಲಿ ಬೆಂಗಳೂರಿನ ವೈಟ್‌ ಫೀಲ್ಡ…, ಬಳ್ಳಾರಿ, ಕುಣಿಗಲ್‌ನಲ್ಲಿ ಆಕ್ಸಿಜನ್‌ ಪ್ಲ್ರಾಂಟ್‌ಗಳಿವೆ. ಪ್ರಸ್ತುತ ಬೇಡಿಕೆ ಹೆಚ್ಚಳವಾಗಿರುವುದರಿಂದ ಪೂರೈಕೆಗೆ ಮುಂದೆ ಸಮಸ್ಯೆಯಾಗಲಿದೆ. ಇದಕ್ಕೆ ಕಿಮ್ಸ್‌ ಆಸ್ಪತ್ರೆ ಘಟನೆ ನಿದರ್ಶನವಾಗಿದ್ದು, ಇದರಿಂದ ಎಚ್ಚೆತ್ತುಕೊಂಡು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next