Advertisement

ದ.ಕ. ಜಿಲ್ಲೆಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ

01:50 AM May 04, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆಕ್ಸಿಜನ್‌ ಬೇಡಿಕೆ ಕೂಡ  ದುಪ್ಪಟ್ಟಾಗುತ್ತಿದೆ. ಇದರ ಬೆನ್ನಲ್ಲೇ ಆಕ್ಸಿಜನ್‌ ಉತ್ಪಾದನೆಗೆ ಬೇಕಾಗುವ”ಕಚ್ಚಾ ವಸ್ತು’ಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಕೋವಿಡ್ ಗೂ ಮುನ್ನ ದ.ಕ. ಜಿಲ್ಲೆಯಲ್ಲಿ ಪ್ರತೀ ದಿನಕ್ಕೆ ಸುಮಾರು 6 ಟನ್‌ ಆಕ್ಸಿಜನ್‌ ಅಗತ್ಯವಿತ್ತು. ಸದ್ಯ ಪ್ರತೀ ದಿನಕ್ಕೆ 12 ಟನ್‌ ಬೇಡಿಕೆಯಿದೆ.

Advertisement

ವೆನ್ಲಾಕ್‌ ಹಾಗೂ ಜಿಲ್ಲೆಯ  6 ಮೆಡಿಕಲ್‌ ಕಾಲೇಜಿನ ಆಸ್ಪತ್ರೆಗಳಲ್ಲಿ “ಆಕ್ಸಿಜನ್‌ ಸ್ಟೋರೇಜ್‌ ಟ್ಯಾಂಕ್‌’ ಇದ್ದು,  ಇದಕ್ಕೆ ಬಳ್ಳಾರಿ ಆಕ್ಸಿಜನ್‌ ಘಟಕದಿಂದ ತಂದು “ಫಿಲ್‌’ ಮಾಡಲಾಗುತ್ತಿದೆ.

 ಗಂಭೀರ ಕ್ರಮ ಅಗತ್ಯ :

ಕೇರಳದ ಪಾಲಕ್ಕಾಡ್‌ನಿಂದ 20 ಕೆ.ಎಲ್‌., ಬಳ್ಳಾರಿಯಿಂದ 16 ಕೆ.ಎಲ್‌. ಕಚ್ಚಾವಸ್ತು ವಾರದಲ್ಲಿ ಮಂಗಳೂರಿಗೆ ಬರುತ್ತಿತ್ತು. ಈಗ ವ್ಯತ್ಯಯವಾಗುತ್ತಿದೆ. ಬಳ್ಳಾರಿ ಯಿಂದ ಕಚ್ಚಾವಸ್ತು ನಿಯಮಿತವಾಗಿ ದ.ಕ. ಜಿಲ್ಲೆಗೆ ದೊರೆಯುವಂತೆ ಮಾಡುವ ಮಹತ್ತರ ಜವಾಬ್ದಾರಿ ಸರಕಾರದ ಮೇಲಿದೆ. ಚಾಮರಾಜನಗರದಲ್ಲಿ ಸಂಭವಿಸಿದ ದುರಂತ ಕಣ್ಣೆದುರು ಇರುವ ಹಿನ್ನೆಲೆಯಲ್ಲಿ  ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಆಡಳಿತ ವ್ಯವಸ್ಥೆ/ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಸದ್ಯ ಕೈಗಾರಿಕಾ ಬಳಕೆಗೆ ಬೇಕಾಗಿದ್ದ ಆಕ್ಸಿಜನ್‌ ಸ್ಥಗಿತಗೊಳಿಸಲಾಗಿದ್ದು, ಕೇವಲ ಅಗತ್ಯ ಆಹಾರ ವಸ್ತುಗಳ ಉತ್ಪಾದನೆಗೆ ಮಾತ್ರ ಅವಕಾಶ ನೀಡಲಾಗಿದೆ.

3 ತಯಾರಿಕಾ ಘಟಕ :

Advertisement

ಜಿಲ್ಲೆಯಲ್ಲಿ 3 ಆಕ್ಸಿಜನ್‌ ತಯಾರಿ ಘಟಕಗಳಿವೆ. ಈ ಪೈಕಿ “ಲಿಕ್ವಿಡ್‌ ಮೆಡಿಕಲ್‌  ಆಕ್ಸಿಜನ್‌’ ಅನ್ನು ಪಾಲಕ್ಕಾಡ್‌ನಿಂದ  ತಂದು ರೀಫಿಲ್ಲಿಂಗ್‌ ಮಾಡುವ ಒಂದು ಘಟಕ ಹಾಗೂ “ನ್ಯಾಚುರಲ್‌ ಏರ್‌’ ಅನ್ನು ಕಂಪ್ರಸ್‌ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್‌ ತಯಾ ರಿಸುವ ಮತ್ತು ರೀಫಿಲ್ಲಿಂಗ್‌ ಮಾಡುವ ಎರಡು ಉತ್ಪಾದನಾ ಘಟಕಗಳು ಕಾರ್ಯಾಚರಿಸುತ್ತಿವೆ. ಸದ್ಯ ಆಕ್ಸಿಜನ್‌ ಘಟಕದಿಂದ ಕೇವಲ 4 ಟನ್‌ ನಷ್ಟು ವೈದ್ಯಕೀಯ ಆಕ್ಸಿಜನ್‌ ಅನ್ನು ಮಂಗಳೂರಿನಲ್ಲಿಯೇ ಉತ್ಪಾದಿಸಿದರೆ, 8 ಟನ್‌ಗಳಿಗೆ ಬೇಕಾಗುವ ಆಕ್ಸಿಜನ್‌ ಅನ್ನು “ಕಚ್ಚಾವಸ್ತು’ವನ್ನು ಕೇರಳದಿಂದ ತರಿಸಿ ಉತ್ಪಾದಿಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್‌ ಕೊರತೆಯಿಲ್ಲ. ಮೂರು ಉತ್ಪಾದಕ ಸಂಸ್ಥೆಗಳು  ಸರಬರಾಜು ಮಾಡುತ್ತಿವೆ. ಆದರೆ, ಆಕ್ಸಿಜನ್‌ ರೀಫಿಲ್ಲಿಂಗ್‌ ಮಾಡುವ ಸಂಸ್ಥೆಗೆ ಕಚ್ಚಾ ವಸ್ತುಗಳು ಕೇರಳದಿಂದ ಬರುವಾಗ ಕೊಂಚ ಏರುಪೇರು ಆಗುತ್ತಿದೆ. ಇದನ್ನು ಸರಕಾರದ ಗಮನಕ್ಕೆ ತರಲಾಗಿದ್ದು, ಬಳ್ಳಾರಿಯಿಂದಲೇ ಕಚ್ಚಾವಸ್ತು ನೀಡುವಂತೆ ಸರಕಾರದ ಗಮನಸೆಳೆಯಲಾಗಿದೆ. ಡಾ| ರಾಜೇಂದ್ರ ಕೆ.ವಿ., ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next