Advertisement

250 ಯೂನಿಟ್ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ

08:27 PM May 09, 2021 | Team Udayavani |

ಬೆಂಗಳೂರು : ಕೋವಿಡ್ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್ ಗಳ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಗೆ ರವಿವಾರದಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಚಾಲನೆ ನೀಡಿದರು.

Advertisement

ಆಕ್ಸಿಜನ್ ಬ್ಯಾಂಕ್ ಗೆ ಚಾಲನೆ ನೀಡಿ ಮಾತನಾಡಿದ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು, ” ಕೋವಿಡ್ ನ ಅಲ್ಪ ಗುಣಲಕ್ಷಣಗಳನ್ನು ಹೊಂದಿದ ಹಲವು ರೋಗಿಗಳ ಆರೋಗ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಒಮ್ಮೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.ಆಸ್ಪತ್ರೆ ಬೆಡ್ ಹಂಚಿಕೆಗಿಂತ ಪೂರ್ವದಲ್ಲಿ ಆಕ್ಸಿಜನ್ ಒದಗಿಸಿದಲ್ಲಿ ರೋಗಿಗಳಿಗೆ ಅತ್ಯಂತ ಹೆಚ್ಚಿನ ಸಹಾಯವಾಗಲಿದ್ದು, ಮನೆಯಲ್ಲಿ ಇದ್ದುಕೊಂಡೇ ರೋಗಿಗಳಿಗೆ ಚಿಕಿತ್ಸೆ ನೀಡಬಹುದು” ಎಂದು ತಿಳಿಸಿದರು.

ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ನಾಗರಿಕರು, ಬೆಂಗಳೂರು ದಕ್ಷಿಣ ಸಂಸದರ ವತಿಯಿಂದ ಆರಂಭಿಸಲಾಗಿರುವ ಕೋವಿಡ್ ರಕ್ಷಾ ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಸ್ವಯಂಸೇವಕರು ಕರೆಗೆ ಸ್ಪಂದಿಸಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ಅವರ ಮನೆಗೇ ನೇರವಾಗಿ ತಲುಪಿಸಲಾಗುತ್ತದೆ. ರೋಗಿಗಳ ಹೆಸರು, ವಯಸ್ಸು,ದೂರವಾಣಿ ಸಂಖ್ಯೆ,ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣ, ಆರೋಗ್ಯ ಸ್ಥಿತಿಗತಿಗಳ ವಿವರಗಳನ್ನು ಸಲ್ಲಿಸಿದ ನಂತರ ಆಧಾರ್ ಕಾರ್ಡ್, ಪಲ್ಸ್ ಆಕ್ಸಿಮೀಟರ್ ರೀಡಿಂಗ್ ನೊಂದಿಗೆ ರೋಗಿಯ ಫೋಟೋ ಕಳುಹಿಸಬೇಕಾಗುತ್ತದೆ. ಎಂ ಪಿ ಕಛೇರಿಯ ಸ್ವಯಂಸೇವಕರು ಡಾಕ್ಟರ್ ಪ್ರೀಸ್ಕ್ರಿಪ್ಷನ್ ಧೃಢೀಕರಿಸಿಕೊಂಡ ನಂತರ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಆಟೋ ಅಥವಾ ಗೂಡ್ಸ್ ವೆಹಿಕಲ್ ಗಳಿಂದ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ :ಮನುಷ್ಯರ ನಡುವೆ 6 ಅಡಿ ಅಂತರವಿದ್ದರೂ ಸೋಂಕು ಹರಡಬಲ್ಲದು : ಅಮೆರಿಕ ತಜ್ಞರ ಎಚ್ಚರಿಕೆ

ನಂತರ ಮಾತನಾಡಿದ ಸಚಿವರು ” ಪ್ರಸ್ತುತ ನಮ್ಮ ಕಚೇರಿಯ ವತಿಯಿಂದ 250 ಕಾನ್ಸನ್ಟ್ರೇಟರ್ ಗಳು ಕಾರ್ಯಾಚರಣೆಯಲ್ಲಿದ್ದು, ಇವುಗಳ ಸಂಖ್ಯೆಯನ್ನು 900-1000ಕ್ಕೆ ಏರಿಸಲಿದ್ದೇವೆ. ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳು ಆಸ್ಪತ್ರೆಗಳಿಗೆ ಪರ್ಯಾಯ ಅಲ್ಲದಿದ್ದರೂ 85-92ರ ನಡುವಿನ ಸ್ಯಾಚುರೇಷನ್ ಪ್ರಮಾಣವಿರುವ ರೋಗಿಗಳಿಗೆ ಆಸ್ಪತ್ರೆ ಬೆಡ್ ಸಿಗುವ ಹಲವು ಘಂಟೆಗಳ ವರೆಗೆ ಸ್ಥಿರತೆಯನ್ನು ಕಾಪಾಡಲು ಸಹಕಾರಿಯಾಗಲಿದೆ. ಆದೇ ರೀತಿ ಕೋವಿಡ್ ಚಿಕಿತ್ಸೆ ನಂತರ ಡಿಸ್ಚಾರ್ಜ್ ಆದ ವ್ಯಕ್ತಿಗಳಿಗೆ ಪೂರ್ಣ ಗುಣಮುಖರಾಗುವ ತನಕವೂ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳು ಸಹಕಾರಿಯಾಗಲಿವೆ.ಇಂತಹ ಸನ್ನಿವೇಶಗಳಲ್ಲಿ ಡಾಕ್ಟರ್ ಪ್ರೀಸ್ಕ್ರಿಪ್ಷನ್ ಅತ್ಯವಶ್ಯಕ. ಈಗಾಗಲೇ 130ಕ್ಕೂ ಅಧಿಕ ರೋಗಿಗಳಿಗೆ ಕಾನ್ಸನ್ಟ್ರೇಟರ್ ಗಳನ್ನು ಕಳುಹಿಸಿ ಸಹಾಯ ಒದಗಿಸಲಾಗಿದೆ. ರೋಗಿಯು ಕೋವಿಡ್ ನಿಂದ ಗುಣಮುಖರಾದ ತಕ್ಷಣ ಅಥವಾ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಾದ ತಕ್ಷಣ ಕಾನ್ಸನ್ಟ್ರೇಟರ್ ಗಳನ್ನು ಮರಳಿ ಪಡೆದು, ಸ್ಯಾನಿಟೈಜ್ ಮಾಡಿದ ನಂತರ ಮತ್ತೊಬ್ಬರ ಸೇವೆಗೆ ಪೂರೈಸಲಾಗುವುದು. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಸುರಕ್ಷತೆಗಾಗಿ 3 ಸಾವಿರ ರೂ,ಗಳ ಡಿಪಾಸಿಟ್ ಅನ್ನು ಪಡೆಯಲಾಗುತ್ತಿದ್ದು,ಕಾನ್ಸನ್ಟ್ರೇಟರ್ ಮರಳಿ ಪಡೆಯುವಾಗ ಅದನ್ನು ಹಿಂದಿರುಗಿಸಲಾಗುವುದು” ಎಂದು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next