Advertisement

 ಎಸ್ಪಿ ಸ್ನೇಹಿತರ ಬಳಗದಿಂದ ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ಕೊಡುಗೆ

07:10 PM May 28, 2021 | Team Udayavani |

ಧಾರವಾಡ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮುನ್ನಡೆಸುತ್ತಿರುವ ಮೆಡಿಕಲ್‌ ಆಕ್ಸಿಜನ್‌ ಫಾರ್‌ ಆಲ್‌ ತಂಡದಿಂದ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಧಾರವಾಡ ಆರೋಗ್ಯ ಇಲಾಖೆಗೆ ವಿತರಿಸಲಾಯಿತು.

Advertisement

ನಗರದ ಎಸ್‌ಪಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ ಅವರಿಗೆ ಕಾನ್ಸಂಟ್ರೇಟರ್‌ಗಳನ್ನು ಹಸ್ತಾಂತರಿಸಲಾಯಿತು. ಬಳಿಕ ಮಾತನಾಡಿದ ಎಸ್‌ಪಿ ಕೃಷ್ಣಕಾಂತ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ಕಡೆ ಕೋವಿಡ್‌ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಲ್ಲಿ ದಾಖಲಿರುವ ಸೋಂಕಿತರಿಗೆ ಉಸಿರಾಟ ತೊಂದರೆ ಉಂಟಾದರೆ ತಕ್ಷಣ ಅವರ ಸಹಾಯಕ್ಕೆ ನೆರವಾಗಲು ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ನೀಡಲಾಗಿದೆ.

ಪೊಲೀಸ್‌ ಇಲಾಖೆಯಿಂದ ಎರಡು ಕಾನ್ಸಂಟ್ರೇಟರ್‌ಗಳನ್ನು ಈಗಾಗಲೇ ನವಲಗುಂದ ತಾಲೂಕಾಸ್ಪತ್ರೆಗೆ ನೀಡಲಾಗಿದೆ ಎಂದರು. ನನ್ನ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮೆಡಿಕಲ್‌ ಆಕ್ಸಿಜನ್‌ ಫಾರ್‌ ಆಲ್‌ ತಂಡ ಮಾಡಿದ್ದಾರೆ. ನಾನು ಸೇರಿದಂತೆ ಸ್ನೇಹಿತರೆಲ್ಲ ಸೇರಿ ಅಗತ್ಯವಿರುವವರಿಗೆ ಆಕ್ಸಿಜನ್‌ ನೆರವಾಗಲು ಈ ತಂಡ ಕಟ್ಟಿದ್ದೇವೆ. ನಮ್ಮ ತಂಡದಿಂದ 8 ಲೀಟರ್‌ ಆಕ್ಸಿಜನ್‌ ಸಾಮರ್ಥ್ಯದ ಒಟ್ಟು 22 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಧಾರವಾಡ ಜಿಲ್ಲೆಗೆ ತರಿಸಿದ್ದೇವೆ. ಅವುಗಳನ್ನು ತಾಲೂಕಾಸ್ಪತ್ರೆ, ಪೊಲೀಸ್‌ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಕೊವೀಡ್‌ ಕೇರ್‌ ಸೆಂಟರ್‌ಗಳಿಗೆ ಬಳಸಲು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ ಮಾತನಾಡಿ, ವಿಶೇಷ ಆಸಕ್ತಿ ಹಾಗೂ ಸಾಮಾಜಿಕ ಕಳಕಳಿಯಿಂದ ಸುಮಾರು 22 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ತಮ್ಮ ವೈಯಕ್ತಿಕ ಸಹಾಯದಿಂದ ಜಿಲ್ಲೆಗೆ ನೀಡಿರುವ ಎಸ್‌ಪಿ ಕೃಷ್ಣಕಾಂತ ಅವರಿಗೆ ಧನ್ಯವಾದಗಳು. ಜಿಲ್ಲಾಡಳಿತದಿಂದ ಎಲ್ಲ ತಾಲೂಕುಗಳಲ್ಲಿ ಮತ್ತು ಅಗತ್ಯವಿರುವ ಹೋಬಳಿ ಅಥವಾ ಗ್ರಾಮಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಗಳನ್ನು ಆರಂಭಿಸಲಾಗಿದೆ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ನಾವು ಆಕ್ಸಿಜನ್‌ ವ್ಯವಸ್ಥೆ ಮಾಡುವುದರಿಂದ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಎಸ್‌ಪಿ ಅವರು ನೀಡಿರುವ ಕಾನ್ಸಂಟ್ರೇಟರ್‌ ಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಅಗತ್ಯವಿರುವ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಎಂದರು. ಡಿವೈಎಸ್‌ಪಿ ಮಲ್ಲಿಕಾರ್ಜುನ ಸಂಕದ, ಪಿಎಸ್‌ಐ ಮಹೇಂದ್ರಕುಮಾರ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next