Advertisement

ವಿಸ್ಟ್ರಾನ್‌ನಿಂದ 10 ಆಮ್ಲಜನಕ ಸಾಂದ್ರಕ

06:37 PM Jun 05, 2021 | Team Udayavani |

ಕೋಲಾರ: ವಿಸ್ಟ್ರಾನ್‌ ಸಂಸ್ಥೆಯ ಸಿಎಸ್‌ಆರ್‌ ಅನುದಾನದಲ್ಲಿಜಿಲ್ಲೆಗೆ 10 ಆಕ್ಸಿಜನ್‌ ಸಾಂದ್ರಕ ನೀಡಿರುವುದರಿಂದ ಕೊರೊನಾನಿಯಂತ್ರಣಕ್ಕೆ ತುಂಬಾ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ತಿಳಿಸಿದರು.

Advertisement

ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಸ್ಟ್ರಾನ್‌ ಮ್ಯಾನುಫ್ಯಾಕ್ಚರಿಂಗ್‌ ಇಂಡಿಯಾ ಸಂಸ್ಥೆಯಿಂದ 10ಆಕ್ಸಿಜನ್‌ ಸಾಂದ್ರಕ ಸ್ವೀಕರಿಸಿ ಮಾತನಾಡಿ, ಆಕ್ಸಿಜನ್‌ಸಾಂದ್ರಕಗಳನ್ನು ಜಿಲ್ಲೆಯ ಸಮುದಾಯ, ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ವಿತರಿಸಲಾಗುವುದು. ಶೀಘ್ರ ವಿಸ್ಟ್ರಾನ್‌ ಸಂಸ್ಥೆಯಿಂದತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಆಮ್ಲಜನಕಉತ್ಪಾದಕ ಘಟಕ ಸ್ಥಾಪಿಸಲಾಗುತ್ತಿದೆ.

ಈ ತುರ್ತು ಸಂದರ್ಭದಲ್ಲಿವಿಸ್ಟ್ರಾನ್‌ ಕಂಪನಿಯು ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು, ಜಿಲ್ಲೆಯ ಜನತೆಗೆ ಸಾಕಷ್ಟು ಉದ್ಯೋಗಅವಕಾಶ ಕಲ್ಪಿಸಿರುವುದು ತುಂಬಾ ಸಂತೋಷದ ವಿಷಯ ಎಂದುತಿಳಿಸಿದರು.

ಕಂಪನಿ ಭಾರತದ ವ್ಯವಸ್ಥಾಪಕ ನಿರ್ದೇಶಕಎಂ.ನಾಗರಾಜ್‌ ಮಾತನಾಡಿ, ವಿಸ್ಟ್ರಾನ್‌ ಇನ್ಫೋಕಾಮ್‌ಉತ್ಪಾದನಾ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳಮೇಲೆ ಬಾರಿ ಒತ್ತಡವಿದೆ. ಅದನ್ನು ನಿರ್ವಹಿಸಲು ಜಿಲ್ಲಾಡಳಿತವುಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ. ಅವರೊಂದಿಗೆ ನಾವುಕೈಜೋಡಿಸಿ ಆಸ್ಪತ್ರೆಗಳಿಗೆ ಬೇಕಾದ ಆಮ್ಲಜನಕದ ಪೂರೈಕೆಹೆಚ್ಚಿಸಲಾಗುತ್ತಿದೆ. ಸಿ.ಎಸ್‌.ಅರ್‌. ಕಾರ್ಯಕ್ರಮದ ಭಾಗವಾಗಿನಮ್ಮ ಬೆಂಬಲವನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ವಿಸ್ಟ್ರಾನ್‌ ಕಂಪನಿಯ ಆಡಳಿತದ ಸೂಚನೆಯಂತೆಶೀಘ್ರ ತಾಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಜನರೇಟರ್‌ಸ್ಥಾವರವನ್ನು ಸ್ಥಾಪಿಸಲಿದ್ದೇವೆ ಎಂದು ತಿಳಿಸಿದರು. ಜಿಲ್ಲಾಆರೋಗ್ಯಾಧಿಕಾರಿ ಡಾ.ಜಗದೀಶ್‌, ವರ್ಚುವಲ್‌ ಮೂಲಕತೈವಾನ್‌ನ ವಿಸ್ಟ್ರಾನ್‌ ಸಂಸ್ಥೆಯ ಉಪಾಧ್ಯಕ್ಷ ಹಂಕ್‌ ಸುಮಾತನಾಡಿದರು. ವಿಸ್ಟ್ರಾನ್‌ ಇಂಡಿಯಾದ ಪ್ರಧಾನ ವ್ಯವಸ್ಥಾಪಕಸೆಂಥಿಲ್‌ಕುಮಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next