Advertisement

ಜಿಲ್ಲೆಯಲ್ಲಿ ಆಕ್ಸಿಜನ್‌ ಬಸ್‌ ಸೇವೆ ಆರಂಭ

09:03 PM May 25, 2021 | Team Udayavani |

ಕೊಪ್ಪಳ: ಎನ್‌ಇಕೆಎಸ್‌ಆರ್‌ಟಿಸಿ ಮೂಲಕ ನೂತನವಾಗಿ ನಿರ್ಮಿಸಿದ ಆಕ್ಸಿಜನ್‌ ಬಸ್‌ ಅನ್ನು ಡಿಸಿಎಂ ಲಕ್ಷ ¾ಣ ಸವದಿ ಅವರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದರು.

Advertisement

ಈ ವೇಳೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಳಿಕ ಡಿಸಿಎಂ ಲಕ್ಷ¾ಣ ಸವದಿ ಮಾತನಾಡಿ, ಬೆಂಗಳೂರು ಮಾದರಿಯಲ್ಲಿ ಗುಜರಿಗೆ ಹಾಕುವ ಬಸ್‌ಗಳನ್ನೇ ಸೋಂಕಿತರ ಜೀವ ಉಳಿಸಲು ತುರ್ತು ಆಕ್ಸಿಜನ್‌ ಬಸ್‌ಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ತಾಲೂಕಿಗೆ ಒಂದರಂತೆ ಶಾಸಕರ ನಿಧಿ ಬಳಕೆ ಮಾಡಿ ಆಕ್ಸಿಜನ್‌ ಯುಕ್ತ ಬಸ್‌ ಸೇವೆಗೆ ಒದಗಿಸಿ ಎಂದು ಕೆಎಸ್‌ಆರ್‌ ಟಿಸಿ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ. ಮುಲ್ಲಾ ಅವರಿಗೆ ಸೂಚಿಸಿದರು.

ರಾಜ್ಯದಲ್ಲಿ 10 ಲಕ್ಷ ಕಿ.ಮೀ.ಗೂ ಹೆಚ್ಚು ಓಡಿದ ಬಸ್‌ಗಳನ್ನು ಗುಜರಿಗೆ ಹಾಕಬೇಕು. ಆದರೆ ಅಂತಹ ಬಸ್‌ಗಳನ್ನು ಆಧುನೀಕರಿಸಿ, ಆಕ್ಸಿಜನ್‌ಯುಕ್ತ ಬಸ್‌ಗಳನ್ನಾಗಿ ಪರಿವರ್ತಿಸಿದ್ದೇವೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾದ ವೇಳೆ ಈ ಬಸ್‌ಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ರೋಗಿಗಳಿಗೆ ಅನುಕೂಲ ಆಗುತ್ತದೆ. ರಾಜ್ಯದಲ್ಲಿ 100 ಆಮ್ಲಜನಕಯುಕ್ತ ಬಸ್‌ಗಳನ್ನು ತಯಾರಿಸಲು ಯೋಚಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೆ ಹಾಗೂ ದೊಡ್ಡ ದೊಡ್ಡ ತಾಲೂಕುಗಳಿಗೂ ಆಮ್ಲಜನಕಯುಕ್ತ ಬಸ್‌ ಒದಗಿಸಲಾಗುತ್ತದೆ. ಈ ಬಸ್‌ 5 ಆಕ್ಸಿಜನ್‌ ಬೆಡ್‌ ಹಾಗೂ 1 ವೆಂಟಿಲೇಟರ್‌ ಬೆಡ್‌ ಹೊಂದಿದೆ. ಫ್ಯಾನ್‌ ಕೂಡ ಅಳವಡಿಸಲಾಗಿದೆ. ಇದರಲ್ಲಿ ಒಬ್ಬ ವೈದ್ಯರು, ನರ್ಸ್‌, ಸಿಬ್ಬಂದಿ ಇರುತ್ತಾರೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಇಲಾಖೆ ಅಡಿ ಬರುವ ಎಲ್ಲ ನಿಗಮಗಳ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು, ಬೇರೆ ಬೇರೆ ರಾಜ್ಯದವರು ಇದರ ಮಾಹಿತಿ ಪಡೆದು, ತಮ್ಮ ರಾಜ್ಯದಲ್ಲೂ ಇಂತಹ ಆಮ್ಲಜನಕಯುಕ್ತ ಬಸ್‌ ತಯಾರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್‌ ಹಾಗೂ ಬಸವರಾಜ ದಢೇಸುಗೂರು, ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಎಸ್ಪಿ ಟಿ. ಶ್ರೀಧರ, ಡಿಎಚ್‌ಒ ಡಾ| ಟಿ. ಲಿಂಗರಾಜು, ಸಿ.ವಿ. ಚಂದ್ರಶೇಖರ, ಎಂ.ಎ. ಮುಲ್ಲಾ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next