Advertisement
ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಇದರ ಪ್ರಾಯೋಗಿಕ ಪರೀಕ್ಷೆಗೆ ವೇದಿಕೆ ಕಲ್ಪಿಸಲು ಪ್ರಯತ್ನಗಳು ಆರಂಭವಾಗಿವೆ.ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ಲಸಿಕೆಯನ್ನು ಭಾರತಕ್ಕೆ ಪರಿಚಯಿಸಲು ಉತ್ಸುಕವಾಗಿದೆ. ಹಾಗಾಗಿ, ಅದನ್ನು ತಯಾರಿಸಲು ಅನುಮತಿ ಪಡೆದಿರುವ ಬ್ರಿಟನ್‌ನ ಆ್ಯಸ್ಟ್ರಾ ಝೆನಿಕಾ ಸಂಸ್ಥೆಯಿಂದ ತಾನು ಲಸಿಕೆಗಳನ್ನು ಪಡೆಯಲು ನಿರ್ಧರಿಸಿರುವ ಸೆರಮ್ ಸಂಸ್ಥೆ, ಇದಕ್ಕಾಗಿ ಒಪ್ಪಿಗೆ ನೀಡುವಂತೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯಕ್ಕೆ (ಡಿಸಿಜಿಐ) ಮನವಿ ಸಲ್ಲಿಸಿದೆ. ಅನುಮತಿ ಸಿಕ್ಕಿದರೆ ಮುಂದಿನ ತಿಂಗಳಿಂದ ಕ್ಲಿನಿಕಲ್ ಟ್ರಯಲ್ ಶುರುವಾಗುವ ಸಾಧ್ಯತೆ ಇದೆ.
ಶೇ.24 ಮಂದಿ ಬಾಧಿತರು: ದಿಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.24 ಮಂದಿ ಕೋವಿಡ್ 19ಗೆ ಬಾಧಿತರಾಗಿದ್ದಾರೆ ಎಂದು ಸೆರೊ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಶೇ.23.48 ಮಂದಿ ಮಾತ್ರ ಕೋವಿಡ್ 19ಗೆ ಬಾಧಿತರಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ಸೋಂಕುರಹಿತ ಲಕ್ಷಣ ಹೊಂದಿದ್ದಾರೆ. ಆದಾಗ್ಯೂ ಜನಸಂಖ್ಯೆಯ ಗಮನಾರ್ಹ ಪ್ರಮಾಣ ಇನ್ನೂ ದುರ್ಬಲವಾಗಿದೆ ಎಂದು ಸೆರೊ ಎಚ್ಚರಿಸಿದೆ.
Related Articles
ಭಾರತದಲ್ಲಿ ಎರಡು ಲಸಿಕೆಗಳು ಮೊದಲ ಮತ್ತು 2ನೇ ಹಂತದ ಪ್ರಯೋಗ ಪ್ರಕ್ರಿಯೆಯಲ್ಲಿದ್ದು, ಅವುಗಳನ್ನು ಅಗತ್ಯವಿರುವವರಿಗೆ ಲಭ್ಯವಾಗಿಸುವುದು ಹೇಗೆ ಎಂಬ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ನೀತಿ ಆಯೋಗ ತಿಳಿಸಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಭಾರತೀಯರಿಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಲಸಿಕೆ ಲಭ್ಯವಾಗುವಂತೆ ಮಾಡಲು ಸರಕಾರ ಪ್ರಯತ್ನ ನಡೆಸುತ್ತಿದೆ. ಪ್ರಯೋಗವು ವೈಜ್ಞಾನಿಕವಾಗಿ ಮತ್ತು ನೈತಿಕವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆಯೋಗ ಹೇಳಿದೆ.
Advertisement