Advertisement
ಈ ವರ್ಷದ ನೀಟ್ ಫಲಿತಾಂಶಕ್ಕೂ ಮುನ್ನವೇ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್‌ಗೆ ಅರ್ಹತೆ ಗಳಿಸುವುದಾಗಿ ಸಂಸ್ಥೆಯ ರೂವಾರಿ, ಚೇರಮನ್ ಎಂ.ಎಸ್.ಪಾಟೀಲ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದರು. ಫಲಿತಾಂಶ ಹೊರ ಬಿದ್ದು ಕಾಲೇಜುಗಳ ಸೀಟು ಹಂಚಿಕೆ ಮುಕ್ತಾಯ ಹಂತಕ್ಕೆ ಬಂದಾಗ ಅವರ ಆತ್ಮವಿಶ್ವಾಸ ಇನ್ನೂ ಹೆಚ್ಚಾಗಿರುವುದು ದೃಢಪಟ್ಟು 2022-23ನೇ ಸಾಲಿನಲ್ಲಿ ಇದಕ್ಕೂ ಹೆಚ್ಚು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗಿದೆ. ಇದು ಕಾಲೇಜಿನ ಸಾಧನೆಯ ಕಿರೀಟಕ್ಕೆ ಇನ್ನಷ್ಟು ಗರಿಗಳನ್ನು ಸೇರಿಸಿದಂತಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತ ಗ್ರಾಮೀಣ ಭಾಗದ ಬಡವರು, ಕೃಷಿಕರ ಮಕ್ಕಳು ವೈದ್ಯರಾಗುವ ಕನಸು ನನಸು ಮಾಡುತ್ತ ಗ್ರಾಮೀಣ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತ ಮುನ್ನುಗ್ಗುತ್ತಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.
Related Articles
Advertisement
ಪ್ರತಿಭಾವಂತರಿಗಾಗಿ 1.5 ಕೋಟಿ ರೂ. ಮೀಸಲು
ಬಡವರು, ಕೃಷಿಕರ ಬಗ್ಗೆ ಕಾಳಜಿ, ಕನಿಕರ ಹೊಂದಿರುವ ಸರಳ ವ್ಯಕ್ತಿತ್ವದ ಸಂಸ್ಥೆಯ ಚೇರ್ಮನ್ ಎಂ.ಎಸ್.ಪಾಟೀಲರು ಪ್ರತಿ ವರ್ಷ ತಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಅಂದಾಜು 1.5 ಕೋಟಿ ರೂ.ಗಳ ಆರ್ಥಿಕ ನೆರವು ಮೀಸಲಿರಿಸಿದ್ದಾರೆ. 25 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಉಚಿತ ಶಿಕ್ಷಣ, ಎಸ್ಸೆಸ್ಸೆಲ್ಸಿಯಲ್ಲಿ ಶೇ.98ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಪಿಯುಸಿ ಉಚಿತ ಶಿಕ್ಷಣ, ಶೇ.95-98ರೊಳಗಿನ ಅಂಕ ಗಳಿಸಿದವರಿಗೆ ಶುಲ್ಕದಲ್ಲಿ ಶೇ.20, ಶೇ.90-95ರೊಳಗೆ ಅಂಕ ಗಳಿಸಿದವರಿಗೆ ಶುಲ್ಕದಲ್ಲಿ ಶೇ.10 ವಿನಾಯಿತಿ ಕೊಡುವ ಯೋಜನೆ ರೂಪಿಸಿದ್ದಾರೆ. ನೀಟ್ ಗಾಗಿಯೇ ಪ್ರತ್ಯೇಕ ತರಬೇತಿ ಸೌಲಭ್ಯ ಜಾರಿಗೊಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲು, ಬಡವರ ಮೆಡಿಕಲ್ ಕನಸು ನನಸು ಮಾಡಲು ಜೀವವನ್ನು ಗಂಧದಂತೆ ತೇಯುತ್ತ ಸಾಧನೆಯ ಪರಿಮಳ ಹರಿಸತೊಡಗಿದ್ದಾರೆ.
ನೀಟ್ ಸಾಧಕರ ಮೆಡಿಕಲ್ ಕಾಲೇಜುಗಳ ವಿವರ
ಇಲ್ಲಿನ ಉಪನ್ಯಾಸಕರು 9 ವರ್ಷಗಳಿಂದ ನೀಟ್ ಸಹಿತ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ. ಪ್ರಸಕ್ತ ಸಾಲಿನ ನೀಟ್ ಸಾಧಕರು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಕಾರವಾರ, ಗದಗ, ಬಳ್ಳಾರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ರಾಯಚೂರ, ಕಾರವಾರ, ಮಡಿಕೇರಿ, ಚಾಮರಾಜನಗರ, ಕೊಪ್ಪಳ, ಮಂಗಳೂರು, ರಾಮನಗರ ಸೇರಿ ವಿವಿಧ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆದಿರುವುದು ಸಾಧನೆಗೆ ಕೈಗನ್ನಡಿಯಂತಿದೆ. ಇಲ್ಲಿ ದೊರಕುವ ತರಬೇತಿಯನ್ನು ಮಾತುಗಳಲ್ಲಿ ಹೇಳುವುದರ ಬದಲು ಇಲ್ಲಿಗೆ ಬಂದು ಅನುಭವಿಸಿದರೇನೆ ಅದರ ನೈಜತೆ, ಸಾಮರ್ಥಯ, ಮಹತ್ವ ಅರ್ಥವಾಗುವಂತಹದ್ದು. ಗ್ರಾಮೀಣ ಮಕ್ಕಳ ಮೆಡಿಕಲ್ ಸಹಿತ ವೃತ್ತಿಪರ ಶಿಕ್ಷಣಕ್ಕೆ ವೇದಿಕೆ ಒದಗಿಸಿಕೊಟ್ಟು ನೈಜ ಪ್ರತಿಭೆಗೆ ಮನ್ನಣೆ ದೊರಕಿಸಿಕೊಡುವುದು ನನ್ನ ಸಂಕಲ್ಪ. ಸಂಸ್ಥೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ, ಪ್ರೋತ್ಸಾಹಿಸಿದ ಪಾಲಕರಿಗೆ, ಉತ್ತಮ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ನನ್ನೆಲ್ಲ ಸಿಬ್ಬಂದಿ ವರ್ಗಕ್ಕೆ ಋಣಿಯಾಗಿದ್ದೇನೆ. ಎಂ.ಎಸ್.ಪಾಟೀಲ, ಚೇರ್ಮನ್.
-ಡಿ.ಬಿ.ವಡವಡಗಿ