Advertisement

ಮಾಲೀಕತ್ವ ವಿವಾದ: ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರೀಲೀಲಾ ತಾಯಿ ವಿರುದ್ಧ FIR, ಬಂಧನ ಭೀತಿ

05:37 PM Sep 15, 2022 | Team Udayavani |

ಬೆಂಗಳೂರು: ಮಾರಕಾಸ್ತ್ರಗಳೊಂದಿಗೆ ಅಲಯನ್ಸ್ ವಿವಿಗೆ ನುಗ್ಗಿದ್ದ ಆರೋಪದಡಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರಿಗೆ ಬಂಧನ ಭೀತಿ ಎದುರಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Web Exclusive: ಶ್ರೀಲಂಕಾದ ಗೆಲುವು ಆಕಸ್ಮಿಕವಲ್ಲ.. ಅದೊಂದು ಹೋರಾಟ

ಇತ್ತೀಚೆಗೆ ಸ್ವರ್ಣಲತಾ ಹಾಗೂ ಮಧುಕರ್ ಅಂಗೂರ್ ಅವರು ಮಾರಕಾಸ್ತ್ರಗಳೊಂದಿಗೆ ಬೌನ್ಸರ್ ಗಳ ಜತೆ ವಿವಿಗೆ ನುಗ್ಗಿ, ಈ ಕಾಲೇಜು ನಮ್ಮದು, ಕೋರ್ಟ್ ಆದೇಶವಿದೆ ಎಂದು ದಾಂಧಲೆ ನಡೆಸಿರುವುದಾಗಿ ಆರೋಪಿಸಿ ಎಫ್ ಐಆರ್ ದಾಖಲಾಗಿದೆ.

ಅಲಯನ್ಸ್ ವಿವಿಯೊಳಗೆ ಸ್ವರ್ಣಲತಾ ಸೇರಿದಂತೆ ಏಳು ಜನರು ನುಗ್ಗಿರುವುದಾಗಿ ಎಫ್ ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿರುವುದಾಗಿ ವರದಿ ವಿವರಿಸಿದೆ.

ಎಫ್ ಐಆರ್ ದಾಖಲಾದ ಹಿನ್ನೆಲೆಯಲ್ಲಿ ನಟಿ ಶ್ರೀಲತಾ ಅವರ ತಾಯಿ ಸ್ವರ್ಣಲತಾ ಸೇರಿದಂತೆ ಇತರರಿಗೆ ಬಂಧನ ಭೀತಿ ಎದುರಾಗಿದೆ ಎಂದು ವರದಿ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next