Advertisement

‘ಪ್ರಧಾನಿ ಮೋದಿಯವರೇ, ಒಂದು ಕೇಳುತ್ತೇನೆ..’: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಓವೈಸಿ ಟೀಕೆ

09:54 AM Oct 30, 2022 | Team Udayavani |

ವಡೋದರಾ: ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಸಮಿತಿ ರಚನೆಗೆ ಗುಜರಾತ್ ಸರ್ಕಾರ ಮುಂದಾಗಿದ್ದ, ಇದಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ ಗಳಿಸಲು ಬಿಜೆಪಿ ಇದೀಗ ಈ ಯುಸಿಸಿ ವಿಚಾರವನ್ನು ಶುರು ಮಾಡಿದೆ ಎಂದು ಕಿಡಿಕಾರಿದ್ದಾರೆ.

Advertisement

ಗುಜರಾತ್ ನ ಬಸಸ್ಕಾಂತ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುಸಿಸಿ ಕೇಂದ್ರದ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆಯೇ ಹೊರತು ರಾಜ್ಯಗಳದ್ದಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಹಿಂದೂ ಅವಿಭಜಿತ ಕುಟುಂಬಕ್ಕೆ ಆದಾಯ ತೆರಿಗೆ ಪ್ರಯೋಜನಗಳಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರಗಿಡುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿಲ್ಲವೇ ಎಂದು ಅವರು ಕೇಳಿದರು.

ಇದನ್ನೂ ಓದಿ:2.3 ಅಡಿ ಎತ್ತರದ ಹುಡುಗನ ಮದುವೆ ಕನಸು ಕೊನೆಗೂ ನನಸು! ಮೋದಿ, ಯೋಗಿಗೆ ಮದುವೆ ಆಮಂತ್ರಣ

“ಏಕರೂಪ ನಾಗರಿಕ ಸಂಹಿತೆ ಸ್ವಯಂ ಪ್ರೇರಿತವಾಗಿರಬೇಕು, ಕಡ್ಡಾಯವಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದು ನಿಜವಲ್ಲವೇ?  ಆದರೆ ಬಿಜೆಪಿಯು ತನ್ನ ಹಿಂದುತ್ವದ ಅಜೆಂಡಾದೊಂದಿಗೆ ಮುಂದುವರಿಯಲು ಬಯಸುತ್ತದೆ. ಹೀಗಾಗಿ ಮತ ಪಡೆಯಲು ಚುನಾವಣೆಗೆ ಮುನ್ನ ಇಂತಹ ವಿಷಯಗಳನ್ನು ಕೆದಕುತ್ತದೆ” ಎಂದರು.

ಏಕರೂಪ ನಾಗರಿಕ ಸಂಹಿತೆಯು ಅಗತ್ಯವೂ ಅಲ್ಲ, ಅಪೇಕ್ಷಿತವೂ ಅಲ್ಲ ಎಂದು 2018ರಲ್ಲಿ ಕಾನೂನು ಆಯೋಗ ಹೇಳಿದೆ ಎಂದು ಓವೈಸಿ ಹೇಳಿದರು.

Advertisement

“ಮುಸ್ಲಿಮನಿಗೆ ಮದುವೆಯು ಒಂದು ಒಪ್ಪಂದ, ಹಿಂದೂಗಳಿಗೆ ಅದು ಶಾಶ್ವತವಾಗಿ ಬದುಕುವುದು, ಇದು ಭಾರತದ ಬಹುತ್ವವಾಗಿದೆ. ಯುಸಿಸಿಯನ್ನು ಜಾರಿಗೊಳಿಸುವ ಮೂಲಕ ಯಾರಾದರೂ ಆರ್ಟಿಕಲ್ 29 (ಅಲ್ಪಸಂಖ್ಯಾತ ಗುಂಪುಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ) ವಿರುದ್ಧ ಕಾನೂನನ್ನು ಮಾಡಬಹುದೇ?” ಎಂದು ಓವೈಸಿ ಕೇಳಿದರು.

“ಹಿಂದೂ ಅವಿಭಜಿತ ಕುಟುಂಬದ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಯ ಪ್ರಯೋಜನದಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಏಕೆ ಹೊರಗಿಡಲಾಗಿದೆ ಎಂದು ನಾನು ಪ್ರಧಾನಿಯನ್ನು ಕೇಳಲು ಬಯಸುತ್ತೇನೆ? ಇದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿಲ್ಲವೇ?” ಎಂದು ಹೈದರಾಬಾದ್ ಸಂಸದ ಓವೈಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next