Advertisement

ಫ್ಲೈ ಓವರ್‌ ಕೆಳಭಾಗ ಇಂಟರ್‌ಲಾಕ್‌ ಅಳವಡಿಕೆ ಸ್ಥಳ ಪರಿಶೀಲನೆ

12:31 PM Sep 29, 2018 | |

ಬಂಟ್ವಾಳ: ಬಿ.ಸಿ. ರೋಡ್‌ ಫ್ಲೈ ಓವರ್‌ ಕೆಳಭಾಗದಲ್ಲಿ ಪಾದಚಾರಿಗಳಿಗೆ ನಡೆದಾಡಲು ಇಂಟರ್‌ಲಾಕ್‌ ಅಳವಡಿಸುವ ಹಾಗೂ ಹೂವಿನ ಗಾರ್ಡನ್‌ ನಿರ್ಮಿಸುವ ಸಲುವಾಗಿ ಸೆ. 28ರಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಸೂಚನೆಯಂತೆ ಪಿಡಬ್ಲ್ಯುಡಿ ಹಾಗೂ ಮೆಸ್ಕಾಂ ಅಧಿಕಾರಿಗಳ ತಂಡವು ಸರ್ವೆ ಕಾರ್ಯ ನಡೆಸಿತು.

Advertisement

ಬಿ.ಸಿ. ರೋಡ್‌ ನಗರವನ್ನು ಸುಂದರ ನಗರವನ್ನಾಗಿ ಮಾಡುವ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ವೆಚ್ಚವನ್ನು ಖಾಸಗಿ ಕಂಪೆನಿಯೊಂದು ಭರಿಸಲಿದೆ. ಕೈಕಂಬದಿಂದ ಬಿ.ಸಿ. ರೋಡ್‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ದಾರಿದೀಪ ಅಳವ ಡಿಕೆ, ರಸ್ತೆಯ ಬದಿಯ ಗುಂಡಿ ಮುಚ್ಚುವ ಹಾಗೂ ಫುಟ್‌ಪಾತ್‌ ನಿರ್ಮಾಣ ಮಾಡಲು ಸರ್ವೇ ಕಾರ್ಯ ಮಾಡಲಾಯಿತು.

ನೂತನ ಕೆಎಸ್ಸಾರ್ಟಿಸಿ ಮುಂಭಾಗದಲ್ಲಿ ಸರ್ಕಲ್‌ ನಿರ್ಮಾಣ ಮಾಡಲು ನೀಲನಕ್ಷೆಯನ್ನು ರಚಿಸಲಾಯಿತು. ಲೋಕೋಪಯೋಗಿ ಇಲಾಖೆ ಕಾ.ನಿ. ಎಂಜಿನಿಯರ್‌ ಉಮೇಶ್‌ ಭಟ್‌, ಸಹಿತ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next