Advertisement

ಅತಿಕ್ರಮಿಸಿಕೊಂಡಿದ್ದ ಜಮೀನು ವಶ

06:00 AM Oct 27, 2018 | |

ಚಿಂಚೋಳಿ: ತಾಲೂಕಿನ ಕುಂಚಾವರಂ ಹಾಗೂ ಶಿವರಾಮಪುರ ಗ್ರಾಮದ ಮೂಲಕ ಹಾಯ್ದು ಹೋಗಿರುವ ತಾಂಡೂರ-ಕೊಹಿರ ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಸೇರಿದ ಸ್ಥಳದಲ್ಲಿ ಅತಿಕ್ರಮಣವಾಗಿ ಹಾಕಿದ್ದ ತೆಲಂಗಾಣ ರಾಜ್ಯ ಸರ್ಕಾರದ ನಾಮಫಲಕ ತೆರವುಗೊಳಿಸಿ, ಕರ್ನಾಟಕ ರಾಜ್ಯದ ನಾಮಫಲಕ ನೆಟ್ಟು ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣ ಅಗ್ನಿಹೋತ್ರಿ ತಿಳಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಂಧ್ರ ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯಗಳಾಗಿ ವಿಂಗಡಣೆ ಆದಾಗ ಕರ್ನಾಟಕ ರಾಜ್ಯಕ್ಕೆ ಸೇರಿದ ಒಟ್ಟು 2 ಕಿಮೀವರೆಗಿನ ರಸ್ತೆಯನ್ನು ಅತಿಕ್ರಮಣ ಮಾಡಿರುವುದಲ್ಲದೇ ತೆಲಂಗಾಣ ರಾಜ್ಯ ಸರ್ಕಾರ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡುವುದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದೆ. ಆದರೆ ಕರ್ನಾಟಕ ರಾಜ್ಯಕ್ಕೆ ಸೇರಿದ ಶಿವರಾಮಪುರ ಗ್ರಾಮದ ಮಧ್ಯೆದಲ್ಲಿಯೇ ತೆಲಂಗಾಣ ರಾಜ್ಯ ಹೆದ್ದಾರಿ ಎಂದು ನಾಮಫಲಕ ಹಾಕಲಾಗಿತ್ತು. ಹೀಗಾಗಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಜಂಟಿ ಸರ್ವೇ ಮಾಡಿಸಿದಾಗ ಕರ್ನಾಟಕಕ್ಕೆ ಸೇರಿದ 2 ಕಿಮೀ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದು ಸಾಬೀತಾಗಿತ್ತು. ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಅಧಿಕಾರಿಗಳು ಕರ್ನಾಟಕಕ್ಕೆ ಸೇರಿದ ಸ್ಥಳದಲ್ಲಿ ನಾಮಫಲಕ ಹಾಕುವ ಮೂಲಕ ಗಡಿ ತಂಟೆ ಸಮಸ್ಯೆ ಇತ್ಯರ್ಥಗೊಳಿಸಲಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next