ಚಿಂತಾಮಣಿ: ನಿರುದ್ಯೋಗಿ ಯುವಕ, ಯುವತಿಯರಿಗೆ ನಮ್ಮ ಬ್ಯಾಕಿಂಗ್ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದರೆ ಉದ್ಯೋಗ ಸಿಗುವುದು ಖಾತ್ರಿ ಎಂದು ಹೇಳಿ ವಿದ್ಯಾರ್ಥಿಗಳಿಂದ ಲಕ್ಷಾಂ ತರ ರೂ. ಹಣ ಪಡೆದು ರಾತ್ರೋ ರಾತ್ರಿ ಕೋಚಿಂಗ್ ಸೆಂಟರ್ ಕಾಲ್ಕಿತ್ತಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ.
ನಗರದ ಚೇಳೂರು ವೃತ್ತದಲ್ಲಿನ ಅಂಚೆ ಕಚೇರಿ ಮೇಲೆ ಆಂಧ್ರಪ್ರದೇಶದ ಕಡಪ ಮೂಲದ ಉತ್ತಮರೆಡ್ಡಿ ಹಾಗೂ ಸ್ಥಳೀಯರಾದ ಅಂಬರೀಶ್ ಎಂಬು ವವರು ಟರ್ನಿಂಗ್ ಪಾಯಿಂಟ್ ಬ್ಯಾಂಕ್ ಕೋಚಿಂಗ್ ಸೆಂಟರ್ ತೆರೆದು ನಿರು ದ್ಯೋಗಿ ಯುವತಿ, ಯುವತಿಯರು ಹಾಗೂ ಪದವೀಧರರಿಗೆ ಕೋಚಿಂಗ್ ಸೆಂಟರ್‌ನಲ್ಲಿ ಬ್ಯಾಂಕಿಂಗ್, ರೈಲ್ವೆ ಹಾಗೂ ಅಂಚೆ ಇಲಾಖೆ ಮತಿತ್ತರ ಉದ್ಯೋಗ ಗಳಿಗೆ ತರಬೇತಿ ಪಡೆದರೆ ಉದ್ಯೋಗ ಗ್ಯಾರೆಂಟಿ ಸಿಗುತ್ತದೆ ಎಂದು ಪ್ರಾರಂಭ ದಲ್ಲಿ ತಿಳಿಸಿದೆ.
12 ಸಾವಿರ ರೂ.: ತರಬೇತಿ ಕೇಂದ್ರ ದಲ್ಲಿ ಒಂದು ಬಾರಿ ಶುಲ್ಕ ಪಾವತಿಸಿದರೆ ಉದ್ಯೋಗ ಸಿಗುವ ತನಕ ಕೋಚಿಂಗ್ ಉಚಿತವಾಗಿ ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಆಮಿಷ ನೀಡಿ ಮೂರು ವರ್ಷಗಳ ಹಿಂದೆ ಆರಂಭ ವಾದ ಕೋಚಿಂಗ್ ಸೆಂಟರ್ ಇದು ವರೆಗೂ 200ಕ್ಕೂ ಹೆಚ್ಚು ವಿದ್ಯಾರ್ಥಿ ಗಳನ್ನು ದಾಖಲು ಮಾಡಿಕೊಂಡು ತಲಾ ಒಬ್ಬೊಬ್ಬ ವಿದ್ಯಾರ್ಥಿಯಿಂದ ತಲಾ 12 ಸಾವಿರ ರೂ.ನಂತೆ ಹಣ ಕಟ್ಟಿಸಿ ಕೊಂಡಿದ್ದಾರೆ.
ವಿದ್ಯಾರ್ಥಿಗಳ ಆತಂಕ: ಎರಡು ವರ್ಷ ಉತ್ತಮವಾಗಿ ನಡೆದುಕೊಂಡು ಬಂದ ಕೋಚಿಂಗ್ ಸೆಂಟರ್, ಇದೀಗ ನಾಲ್ಕು ದಿನಗಳ ಹಿಂದೆ ಇದ್ದಕ್ಕಿದಂತೆ ವಿದ್ಯಾರ್ಥಿ ಗಳಿಗೆ ಯಾವುದೇ ಮುನ್ಸೂಚನೆ ನೀಡದೆ ರಾತ್ರೋ ರಾತ್ರಿ ಕಚೇರಿಗೆ ಬೀಗ ಜಡಿದು ಕಾಲ್ಕಿತ್ತಿರುವುದನ್ನು ಕಂಡು ಕೋಚಿಂಗ್‌ಗೆ ಬರುತ್ತಿದ್ದ ವಿದ್ಯಾರ್ಥಿಗಳು ಆತಂಕಗೊಳ ಗಾಗಿದ್ದಾರೆ.
ಕರೆ ಮಾಡಿದರೆ ಬೆದರಿಕೆ: ಉತ್ತಮ ತರಬೇತಿ ಪಡೆದು ಉದ್ಯೋಗ ಪಡೆ ಯಲಿ ಎಂಬ ಉದ್ದೇಶದಿಂದ ಬಡವ ರಾದ ನಮ್ಮ ಪೋಷಕರು, ಕೂಲಿ ನಾಲಿ ಸಾಲ ಮಾಡಿ ಬ್ಯಾಂಕಿಂಗ್ ಕೋಚಿಂಗ್ ಸೆಂಟರ್‌ಗೆ ಕಳುಹಿಸಿದ್ದರು. ಆದರೆ ಸೆಂಟರ್‌ನವರು ಯಾವುದೇ ಮುನ್ಸೂ ಚನೆ ನೀಡದೆ ರಾತ್ರೋ ರಾತ್ರಿ ಸೆಂಟರ್‌ಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಕರೆ ಮಾಡಿ ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡರು.
ಪ್ರಕರಣ ದಾಖಲು: ಕೋಚಿಂಗ್ ಸೆಂಟರ್ ಅವರನ್ನು ಕರೆಸಿ ನಮಗೆ ನ್ಯಾಯ ಒದ ಗಿಸಿಕೊಡುವಂತೆ ಆಗ್ರಹಿಸಿ ವಿದ್ಯಾರ್ಥಿ ಗಳು ಚಿಂತಾಮಣಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀ ಸರು ಕೋಚಿಂಗ್ ಸೆಂಟರ್‌ನ ಮಾಲೀ ಕರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.