Advertisement

Lok Sabha; ಅತಿಯಾದ ಆತ್ಮವಿಶ್ವಾಸವೇ  ಬಿಜೆಪಿ ಹಿನ್ನಡೆಗೆ ಕಾರಣ: ಆರ್ಗನೈಸರ್‌ ಮ್ಯಾಗಜಿನ್‌

11:59 PM Jun 11, 2024 | Team Udayavani |

ನವದೆಹಲಿ:  ಬಿಜೆಪಿ ನಾಯಕರು ಅತಿಯಾದ ಆತ್ಮವಿಶ್ವಾಸ ಹೊಂದಿದ್ದೇ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಸ್ಥಾನ ಲಭಿಸಲು ಕಾರಣ ಎಂದು ಆರ್‌ಎಸ್‌ಎಸ್‌ನ ನಿಯತಕಾಲಿಕ “ಆರ್ಗನೈಸರ್‌’ ಟೀಕಿಸಿದೆ.

Advertisement

ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ನಾಯಕರಾಗಲಿ, ಕಾರ್ಯಕರ್ತರಾಗಲಿ ಸಂಘದ ಬೆಂಬಲ ಕೇಳಲು ಬರಲಿಲ್ಲ. ಇದು ಅವರಿಗೆ ಕಡಿಮೆ ಮತಗಳು ಸಿಗಲು ಒಂದು ಕಾರಣ ಎಂದು ಲೇಖನದಲ್ಲಿ ಟೀಕಿಸಲಾಗಿದೆ.

ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವಲ್ಲಿ ನಿರತವಾದ ಬಿಜೆಪಿ ಜನರ ಮಟ್ಟಕ್ಕೆ ಹೋಗಿ ಪ್ರಚಾರ ಮಾಡಲಿಲ್ಲ. ಈ ಚುನಾವಣೆಯು ಬಿಜೆಪಿಯ ಅತಿಯಾದ  ಆತ್ಮವಿಶ್ವಾಸಕ್ಕೆ ಹಿಡಿದ ಕೈಗನ್ನಡಿ ಎಂದು ಬರೆಯಲಾಗಿದೆ. ಆರ್‌ಎಸ್‌ಎಸ್‌ ಸದಸ್ಯ ರತನ್‌ ಶಾರದ ಅವರು ಈ ಅಂಕಣವನ್ನು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next