Advertisement
ಶನಿವಾರ 7 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 57 ಕ್ಷೇತ್ರಗಳಿಗೆ ಕೊನೆಯ ಹಂತದಲ್ಲಿ ಮತದಾನ ನಡೆದಿದ್ದು, ಶೇ.59.15ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಲದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಉಳಿದೆಡೆ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ವಾರಾಣಸಿ ಕ್ಷೇತ್ರಕ್ಕೂ ಇದೇ ಹಂತದಲ್ಲಿ ಮತದಾನ ನಡೆದಿದೆ. ಈ ಮೂಲಕ, ಎ.19ರಂದು ಆರಂಭವಾದ ಮ್ಯಾರಥಾನ್ ಚುನಾವಣ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಹಾರದ ಕುಟುಂಬವೊಂದು ಮನೆಯಲ್ಲಿ ಮಹಿಳೆಯ ಮೃತದೇಹ ಹಾಗೇ ಇಟ್ಟು, ಮತದಾ ನ ಮಾಡಿ ಬಳಿಕ ಅಂತ್ಯಕ್ರಿಯೆ ನಡೆಸಿದ ಘಟನೆ ದೇವಕುಲಿ ಎಂಬಲ್ಲಿ ನಡೆದಿದೆ. ನನ್ನ ತಾಯಿ ನಿಧನರಾಗಿದ್ದಾರೆ. ಅಂತ್ಯಕ್ರಿಯೆಗೆ ಸಮಯ ವಿತ್ತು. ಆದರೆ, ಮತದಾನಕ್ಕಿಲ್ಲ. ಹಾಗಾಗಿ ಮತ ನೀಡಿ, ಬಳಿಕ ಅಂತ್ಯಕ್ರಿಯೆ ನಡೆಸಿದ್ದೇವೆ ಎಂದು ಕುಟುಂಬ ಸದಸ್ಯ ಮಿಥಿಲೇಶ್ ತಿಳಿಸಿದ್ದಾರೆ.
Related Articles
ಮಾಜಿ ಸಿಎಂ ಹೇಮಂತ್ ಸೊರೇನ್ ಸಂಬಂಧಿ ಸೀತಾ ಸೊರೇನ್ ತಾವು ಸ್ಪರ್ಧಿಸಿರುವ ದುಮ್ಕಾ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಸೀತಾ, ನನ್ನ ಕ್ಷೇತ್ರದ ಕಡೆ ಉದ್ದೇಶಪೂರ್ವಕವಾಗಿಯೇ ಮತದಾನ
ವಿಳಂಬ ಮಾಡಲಾಗಿದೆ ಎಂದು ಹೇಳಿದ್ದಾರೆ.
Advertisement
ಅವಕಾಶವಾದಿ ಕೂಟ ಜನರಿಂದ ತಿರಸ್ಕೃತಅವಕಾಶವಾದಿ ಐಎನ್‌ಡಿಐಎ ಕೂಟ ಜನ ಮತ ಪಡೆಯುವಲ್ಲಿ ವಿಫಲವಾಗಿದೆ. ಪ್ರಚಾರದುದ್ದಕ್ಕೂ ಮೋದಿಯನ್ನು ವ್ಯಂಗ್ಯ ಮಾಡುವುದನ್ನೇ ಕಾರ್ಯವನ್ನಾಗಿಸಿಕೊಂಡಿರುವ ಕೂಟವನ್ನು ಜನ ತಿರಸ್ಕರಿಸಿದ್ದಾರೆ. ಎನ್‌ಡಿಎ ಸರಕಾರವನ್ನು ಮರಳಿ ತರುವುದಕ್ಕಾಗಿ ದಾಖಲೆ ಮತದಾನ ಮಾಡಿದವರಿಗೆ ಧನ್ಯವಾದಗಳು.
ನರೇಂದ್ರ ಮೋದಿ, ಪ್ರಧಾನ ಮಂತ್ರಿ ವೋಟ್ ವೀಡಿಯೋ ಮಾಡಿದ ಬಿಎಸ್ಪಿ ಅಭ್ಯರ್ಥಿ ವಿರುದ್ಧ ಕೇಸ್
ಪಂಜಾಬ್‌ನ ಫಿರೋಜ್‌ಪುರ್ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ತಾವು ವೋಟ್ ಮಾಡಿದನ್ನು ವೀಡಿಯೋ ರೆಕಾರ್ಡ್ ಮಾಡಿದ ಆರೋಪ ಎದುರಿಸುತ್ತಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ತಾವು ವೋಟ್ ಮಾಡುವುದನ್ನು ವೀಡಿಯೋ ಮಾಡಿದ ಬಿಎಸ್ಪಿ ಅಭ್ಯರ್ಥಿ ಸುರೀಂದೇರ್ ಕಂಬೋಜ್ ಅದನ್ನು ಶೇರ್ ಮಾಡಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ಅವರ ವಿರುದ್ಧ ದೂರು ದಾಖಲಿಸಿದೆ.