Advertisement

ಮಲ್ಯ, ನೀರವ್, ಚೋಕ್ಸಿಯಿಂದ ₹792.11 ಕೋಟಿ ವಸೂಲಿ

08:59 AM Jul 17, 2021 | Team Udayavani |

ನವದೆಹಲಿ: ದೇಶದ ಬ್ಯಾಂಕ್​ ​ಗಳ ಮೋಸ ಮಾಡಿ  ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಷೇರುಗಳ ಮಾರಾಟದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ಮತ್ತೆ 792.11 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ ಎಂದು ಇಡಿ (ಜಾರಿ ನಿರ್ದೇಶನಾಲಯ) ತಿಳಿಸಿದೆ.

Advertisement

ಈ ಮೂವರ ಆರೋಪಿಗಳ ಆಸ್ತಿ ಮಾರಾಟದಿಂದ 13 ಸಾವಿರದ 109 ಕೋಟಿ ರೂ ವಸೂಲಿಯಾಗಿದೆ ಎಂದು ಇಡಿ ತಿಳಿಸಿದೆ.   ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಲೀಕ ವಿಜಯ್​ ಮಲ್ಯ 9 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಕೊಡಬೇಕಿತ್ತು.

ಪಂಜಾಬ್​ ನ್ಯಾಷನಲ್ ಬ್ಯಾಂಕ್ ​ಗೆ ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್​ ಚೋಕ್ಸಿ 13 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿತ್ತು. ಇದಕ್ಕೂ ಮೊದಲು ಎಸ್‌ ಬಿಐ ನೇತೃತ್ವದ ಒಕ್ಕೂಟವು ಆಸ್ತಿಗಳನ್ನು ಹರಾಜು ಹಾಕುವ ಮೂಲಕ 7 ಸಾವಿರದ 181 ಕೋಟಿ ರೂಪಾಯಿಯನ್ನು ವಸೂಲಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next