Advertisement

ಶೇ.80ರಷ್ಟು ಭತ್ತ ಮಾರಿದ ಮೇಲೆ ಕೇಂದ್ರ ಆರಂಭ

12:31 PM Jan 09, 2017 | Team Udayavani |

ದಾವಣಗೆರೆ: ಮುಕ್ತ ಮಾರುಕಟ್ಟೆಯಲ್ಲಿಯೇ ಕ್ವಿಂಟಾಲ್‌ ಭತ್ತಕ್ಕೆ 2100- 2400 ರೂ.ವರೆಗೆ ಖರೀದಿಯಾಗುತ್ತಿದೆ, ಅಲ್ಲದೆ, ಈಗಾಗಲೇ ಶೇ.70ರಿಂದ 80ರಷ್ಟು ಭತ್ತ ಮಾರಾಟವಾಗಿ ಹೋಗಿದೆ. ಈಗ ರಾಜ್ಯ ಸರ್ಕಾರ 1570 ರೂ. ಗೆ ಕ್ವಿಂಟಾಲ್‌ ಬೆಂಬಲ ಬೆಲೆ ನೀಡಿ ಭತ್ತ ಖರೀದಿಗೆ ಕೇಂದ್ರ ತೆರೆಯಲು ಮುಂದಾಗುತ್ತಿದೆ! 

Advertisement

ಜ.9ರ ಸೋಮವಾರದಿಂದ ದಾವಣಗೆರೆ, ಹೊನ್ನಾಳಿ, ಹರಿಹರ ತಾಲೂಕಿನ ಮಲೆಬೆನ್ನೂರು, ಚನ್ನಗಿರಿ ತಾಲೂಕಿನ ಸಾಗರಪೇಟೆ (ಬಸವಾಪಟ್ಟಣ)ದಲ್ಲಿ ಪ್ರಾರಂಭವಾಗುವ ಭತ್ತ ಖರೀದಿ ಕೇಂದ್ರದಿಂದ ಯಾರಿಗೆ ಲಾಭವಾಗಲಿದೆ ಎಂದು ಕೇಳಿದರೆ ಸಾಧ್ಯವೇ ಇಲ್ಲ. ಯಾರಿಗೂ ಇದರಿಂದ ಲಾಭವಾಗಲ್ಲ. ಬದಲಿಗೆ ನಷ್ಟ ಆಗಲಿದೆ. 

ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವ ಇದೆ. ಉಳಿದ ಭತ್ತ ಮಾರಲು ರೈತರು ಪರದಾಡಬೇಕಾದೀತು. ಇದು ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯಲು ಮುಂದಾಗಿರುವ ವಿಷಯ ಕುರಿತು ಭತ್ತ ಬೆಳೆಗಾರರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಮಾತ್ರವಲ್ಲ ಇದೊಂದು ಹಾಸ್ಯಾಸ್ಪದ ನಡೆ ಎನ್ನುತ್ತಾರೆ. ನ.8ಕ್ಕೂ ಮೊದಲೇ ಭತ್ತಕ್ಕೆ ಭಾರೀ ಬೇಡಿಕೆ ಇತ್ತು. 

ಈ ಬಾರಿಯ ಬೇಸಿಗೆ ಹಂಗಾಮಿನಲ್ಲಿ ಬಹುತೇಕ ಭತ್ತ ಬರುವುದೇ ಇಲ್ಲ ಎಂಬಂತಹ ಸ್ಥಿತಿ ಇರುವ ಹಿನ್ನೆಲೆಯಲ್ಲಿ ದಲ್ಲಾಳಿ, ವರ್ತಕರು ಭತ್ತ ಖರೀದಿಗೆ ಮುಗಿಬಿದ್ದಿದ್ದರು. ಏಕಾಏಕಿ 1000, 500 ರೂ. ಮುಖಬೆಲೆಯ ನೋಟು ರದ್ದಾಗುತ್ತಲೇ ಭತ್ತದ ಬೆಲೆ ಕೊಂಚ ಕುಸಿಯಿತು. ಜೊತೆಗೆ ದಲ್ಲಾಳಿ, ವರ್ತಕರು ಭತ್ತ ಖರೀದಿಗೆ ಹಳೆ ನೋಟು ಕೊಡುವುದಾಗಿ ಹೇಳಿದರು.

ಇದೆಲ್ಲಾ ಗಮನಿಸಿದ ಕೆಲ ರೈತರು ಒಂದಿಷ್ಟು ದಿನಗಳ ಕಾಲ ಭತ್ತವನ್ನು ದಾಸ್ತಾನು ಮಾಡಿಕೊಳ್ಳಲು ನಿರ್ಧರಿಸಿದರು ಎಂಬ ಮಾತುಗಳು ಕೊಳೇನಹಳ್ಳಿಯ ರೈತ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್‌ ಹೇಳುತ್ತಾರೆ. ಕೊಳವೆ ಬಾವಿ ನೀರಲ್ಲಿ ಭತ್ತ ಬೆಳೆಯುವ ರೈತರು ಈಗಾಗಲೇ ಬೇಸಿಗೆ ಭತ್ತ ಬೆಳೆಗೆ ಸಸಿಮಡಿ ಮಾಡಿಕೊಂಡಿದ್ದಾರೆ.

Advertisement

ಇಂತಹ ಸಂದರ್ಭದಲ್ಲಿ ಭತ್ತ ಖರೀದಿಗೆ ಕೇಂದ್ರ ತೆರೆಯುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಪಾಮೇನಹಳ್ಳಿಯ ಮಂಜಪ್ಪ ಹೇಳುವಂತೆ ಭತ್ತಕ್ಕೆ ಈ ಬೆಲೆ ಸಿಗುತ್ತದೆ ಎಂದು ನಾವು ನಿರೀಕ್ಷೆಮಾಡಿರಲಿಲ್ಲ. ಆದರೆ, ಇದೀಗ ಒಳ್ಳೆಯ ಬೆಲೆ ಸಿಕ್ಕಿದೆ. ಈರುಳ್ಳಿ, ಟೊಮೊಟೊ, ಮೆಣಸಿನ ಕಾಯಿ, ಸೊಪ್ಪು ಹೀಗೆ ಎಲ್ಲಾ ತರಕಾರಿ ಬೆಲೆ ನೆಲಕಚ್ಚಿದೆ. 

ಸರ್ಕಾರ ಇಂತಹ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಲು ಕ್ರಮ ವಹಿಸಬೇಕಿತ್ತು. ಆದರೆ, ಚೆನ್ನಾಗಿ ಬೆಲೆ ಇರುವ ಭತ್ತಕ್ಕೆ ಕಡಮೆ ಬೆಲೆ ಘೋಷಣೆಮಾಡಿ, ಖರೀದಿ ಕೇಂದ್ರ ತೆರೆಯುವುದು ಪ್ರಯೋಜವಿಲ್ಲವಂತೆ. ರೈತರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ, ಭತ್ತಕ್ಕೆ ಇನ್ನೂ ಹೆಚ್ಚಿನ ಬೆಲೆ ಕೊಡಿಸುವ ಕುರಿತು ಚಿಂತಿಸಬೇಕಿತ್ತು. 

ಮಾರುಕಟ್ಟೆಯಲ್ಲಿರುವ ಬೆಳೆಗಿಂದ 100-150 ರೂ. ಹೆಚ್ಚಿನ ಬೆಲೆ ನಿಗಿದಮಾಡಿ, ಖರೀದಿಸಲು ಮುಂದಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನಷ್ಟಕ್ಕೆ ತುತ್ತಾಗಿದ್ದ ಭತ್ತ ಬೆಳೆಗಾರರು ಈ ಬಾರಿ ಇನ್ನಷ್ಟು ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದರು. ಇದನ್ನು ಸರ್ಕಾರ ಮಾಡಿಲ್ಲ. ಬದಲಿಗೆ ಬೆಲೆ ಇಳಿಯುವಂತೆ ಮಾಡಿದೆ ಎಂದು ಶಿರಮಗೊಂಡನಹಳ್ಳಿಯ ಭತ್ತ ಬೆಳೆಗಾರ ವಿದ್ಯಾಧರ ಶರ್ಮ ಹೇಳುತ್ತಾರೆ. 

ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರ ಸ್ವತಃ ಸಮಸ್ಯೆ ಸೃಷ್ಟಿಮಾಡುವ ಕೆಲಸಕ್ಕೆ ಕೈ ಹಾಕಿದಂತೆ ಭತ್ತಕ್ಕೆ ತಾನೇ ಕಡಮೆ ಬೆಲೆ ನಿಗದಿಮಾಡಿದೆ. ಕೇಂದ್ರ ಸರ್ಕಾರ 1470 ರೂ. ಬೆಲೆ ಘೋಷಣೆಮಾಡಿದರೆ, ರಾಜ್ಯ ಸರ್ಕಾರ 100 ರೂ.ನ ಪ್ರೋತ್ಸಾಹ ಧನ ನೀಡಿ, ಭತ್ತ ಖರೀದಿಗೆ ಮುಂದಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸವೇ ಸರಿ.

ಇದು ಮೊದಲ ಬಾರಿಯ ಪ್ರಮಾದವೇನಲ್ಲ. ಪ್ರತೀ ಬಾರಿ ಯಾವುದೇ ಕೃಷಿ ಉತ್ಪನ್ನ ಖರೀದಿಗೆ ಖರೀದಿ ಕೇಂದ್ರ ಆರಂಭಿಸಿದಾಗಲೂ ಸರ್ಕಾರ ಬಹುತೇಕ ಆ ಉತ್ಪನ್ನ ರೈತರ ಕೈಯಿಂದ ದಲ್ಲಾಳಿ, ವರ್ತಕರ ಕೈಗೆ ಸೇರಿ ಆಗಿರುತ್ತದೆ. ಈ ಬಾರಿ ಇನ್ನಷ್ಟು ತಡವಾಗಿ ಆರಂಭಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next