Advertisement

ಲಾಕ್ ಡೌನ್ ಎಫೆಕ್ಟ್: ದೆಹಲಿಯಿಂದ 8 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ತವರಿಗೆ ವಾಪಸ್

05:12 PM May 22, 2021 | Team Udayavani |

ನವದೆಹಲಿ:ಕೋವಿಡ್ 19 ಎರಡನೇ ಅಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರರಾಜಧಾನಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಮೊದಲ ನಾಲ್ಕು ವಾರಗಳಲ್ಲಿ ಎಂಟು ಲಕ್ಷಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು ದೆಹಲಿಯಿಂದ ತೆರಳಿದ್ದಾರೆ ಎಂದು ದೆಹಲಿ ಸಾರಿಗೆ ಇಲಾಖೆ ತಿಳಿಸಿದೆ.

Advertisement

ಇದನ್ನೂ ಓದಿ:ಮಾಂಗಲ್ಯ ಮಾರಿದರೂ ಪತಿ ಬದುಕಲಿಲ್ಲ, ಶವಕ್ಕೂ ಹಣ ಬೇಡಿಕೆ!

ಏಪ್ರಿಲ್ 19 ಮತ್ತು ಮೇ 14ರ ನಡುವೆ ಒಟ್ಟು 8,07,032 ಲಕ್ಷ ವಲಸೆ ಕಾರ್ಮಿಕರು ದೆಹಲಿಯನ್ನು ತೊರೆದು ತಮ್ಮ ಊರುಗಳಿಗೆ ಬಸ್ ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ ಮೊದಲ ವಾರದ ಲಾಕ್ ಡೌನ್ ನಲ್ಲಿ 3,79,604 ಲಕ್ಷ ಮಂದಿ ಊರುಗಳಿಗೆ ವಾಪಸ್ ಆಗಿರುವುದಾಗಿ ವರದಿ ವಿವರಿಸಿದೆ.

ಎರಡನೇ ವಾರದಲ್ಲಿ 2,12,448 ಲಕ್ಷ ಮಂದಿ, ಮೂರನೇ ವಾರದಲ್ಲಿ 1,22,490 ಲಕ್ಷ ಜನರು ಹಾಗೂ ನಾಲ್ಕನೇ ವಾರದಲ್ಲಿ 92,490 ಸಾವಿರ ಮಂದಿ ವಲಸೆ ಕಾರ್ಮಿಕರು ದೆಹಲಿಯನ್ನು ತೊರೆದಿದ್ದಾರೆ.

ಸಕಾಲಕ್ಕೆ ನೆರೆಯ ರಾಜ್ಯಗಳ ಸಾರಿಗೆ ಪ್ರಾಧಿಕಾರಗಳ ಜತೆ ಸಂವಹನ ಸಾಧಿಸಿ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಯಿತು. ವಿಶೇಷವಾಗಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳ ಜತೆ ದೆಹಲಿ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿತ್ತು. ಇದರಿಂದ ಯಾವುದೇ ತೊಂದರೆ, ಕಷ್ಟ ಅನುಭವಿಸದೇ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಹಾಯಕವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next