Advertisement

100 ದಿನಗಳಲ್ಲಿ 6.85 ಲಕ್ಷ ಮಂದಿಗೆ ಚಿಕಿತ್ಸೆ

04:02 AM Jan 02, 2019 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ “ಆಯುಷ್ಮಾನ್‌ ಭಾರತ’ ಯೋಜನೆ ಜಾರಿಯಾದ 100 ದಿನಗಳ ಅವಧಿಯಲ್ಲಿ 6.85 ಲಕ್ಷ ಮಂದಿ ಅದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಪ್ರತಿ ದಿನ ಸುಮಾರು 5 ಸಾವಿರ ಕ್ಲೇಮುಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದಿದ್ದಾರೆ. 

Advertisement

ಯೋಜನೆಗೆ 100 ದಿನಗಳು ತುಂಬಿದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದು ಕೊಂಡಿರುವ ಜೇಟಿÉ, ಯೋಜನೆಯ ಬಗ್ಗೆ ದೇಶದ ಜನರಲ್ಲಿ ಅರಿವು ಹೆಚ್ಚಾಗುತ್ತಿದ್ದಂತೆ 1 ಕೋಟಿಗೂ ಅಧಿಕ ಕುಟುಂಬಗಳಿಗೆ ಅದರಿಂದ ಪ್ರಯೋಜನ ಸಿಗಲಿದೆ. 2018 ಸೆ.23ರಂದು ಜಾರಿಯಾದ ಯೋಜನೆ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ “ಆಯುಷ್ಮಾನ್‌ ಭಾರತಕ್ಕೆ 100 ದಿನಗಳು’ ಎಂಬ ಶಿರೋನಾಮೆಯಲ್ಲಿ ಜೇಟಿÉ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

6.85 ಲಕ್ಷ ಮಂದಿ ಯೋಜನೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದರೆ, 5.1 ಲಕ್ಷ ಕ್ಲೇಮುಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಜೇಟ್ಲಿ ಬರೆದುಕೊಂಡಿದ್ದಾರೆ. ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಇದೊಂದು ಭಾರಿ ಬದಲಾವಣೆ ತರುವ ಯೋಜನೆಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. 

ಯೋಜನೆ ಜಾರಿಯಾಗುವುದಕ್ಕೆ ಮೊದಲು ಶೇ.40ರಷ್ಟು ಮಂದಿ ಚಿಕಿತ್ಸೆ ವೆಚ್ಚದಾಯಕ ಎಂದು ಭಾವಿಸಿ ಆಸ್ಪತ್ರೆಯತ್ತ ಹೋಗುವುದನ್ನೇ ನಿಲ್ಲಿಸಿದ್ದರು.ಆದರೆ ಈಗ ಅಷ್ಟು ಪ್ರಮಾಣದ ಜನರು ಸಾರ್ವಜನಿಕ ವೆಚ್ಚದ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next