Advertisement

ಹೋರಾಡಲು ಬಂದ 66 ಸಾವಿರ ಉಕ್ರೇನಿಯರು

10:49 PM Mar 05, 2022 | Team Udayavani |

ರಷ್ಯಾ ವಿರುದ್ಧದ ಯುದ್ಧದಲ್ಲಿ ದೇಶವನ್ನು ಬೆಂಬಲಿಸುವ ನಿಟ್ಟಿನಲ್ಲಿ ಇತರ ದೇಶಗಳಲ್ಲಿರುವ 66 ಸಾವಿರ ಮಂದಿ ಉಕ್ರೇನಿಯರು ಸ್ವದೇಶಕ್ಕೆ ಆಗಮಿಸಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವ ಒಲೆಕ್ಸಿ ರೆಜಿನ್ಕೋವ್‌ ಹೇಳಿದ್ದಾರೆ.

Advertisement

ಇದರಿಂದಾಗಿ ರಷ್ಯಾ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಇಂಬು ಸಿಗಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಆನ್‌ಲೈನ್‌ ಪೋಸ್ಟ್‌ ಒಂದರಲ್ಲಿ ಬರೆದುಕೊಂಡಿರುವ ರೆಜಿನ್ಕೋವ್‌ “ಉಕ್ರೇನಿಯರನ್ನು ಸೋಲಿಸಲು ಸಾಧ್ಯವಿಲ್ಲ.

ವಿದೇಶಗಳಲ್ಲಿ ಇರುವ ನಮ್ಮ ದೇಶದವರು ಆಗಮಿಸುತ್ತಿದ್ದಾರೆ. ಸದ್ಯ 66 ಸಾವಿರ ಮಂದಿ ಆಗಮಿಸಿದ್ದಾರೆ’ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next