Advertisement

ಡೇರಾ ಬಾಬಾ ಕೇಂದ್ರ ಕಚೇರಿಯೊಳಗೆ 600ಕ್ಕೂ ಅಧಿಕ ಅಸ್ಥಿಪಂಜರ!

01:12 PM Sep 20, 2017 | Sharanya Alva |

ಸಿರ್ಸಾ: ಜೈಲುಕಂಬಿ ಎಣಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ನ ಡೇರಾ ಸಚ್ಚಾ ಸೌದಾದಾ ಕೇಂದ್ರ ಕಚೇರಿಯ ಒಳಭಾಗದಲ್ಲಿ ಸುಮಾರು 600ಕ್ಕೂ ಅಧಿಕ ಅಸ್ಥಿಪಂಜರಗಳನ್ನು ಸಮಾಧಿ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಮೂಲಗಳ ಪ್ರಕಾರ, ಸಿರ್ಸಾದಲ್ಲಿರುವ ಡೇರಾ ಕೇಂದ್ರ ಕಚೇರಿಯೊಳಗೆ ಬೃಹತ್ ಪ್ರಮಾಣದಲ್ಲಿ ಅಸ್ಥಿಪಂಜರಗಳನ್ನು ಸಮಾಧಿ ಮಾಡಲಾಗಿದೆ. ಸಮಾಧಿ ಮೇಲೆ ಗಿಡಗಳನ್ನು ನೆಡಲಾಗಿದ್ದು, ಕೆಲವು ದೊಡ್ಡ ಮರಗಳಾಗಿವೆ ಎಂದು ವಿಶೇಷ ತನಿಖಾ ತಂಡ ಜೀ ನ್ಯೂಸ್ ಗೆ ತಿಳಿಸಿದೆ.

ಸಮಾಧಿಯಾಗುವುದೆಂದರೆ ಮೋಕ್ಷ ಸಿಕ್ಕಂತೆ ಎಂಬ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ನ ಆದೇಶದ ನಂತರ ಅಸ್ಥಿಪಂಜರಗಳನ್ನು ಹೂತು ಹಾಕಲಾಗುತ್ತಿತ್ತು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next