ನವ ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಇಬ್ಬರಲ್ಲಿ ಒಬ್ಬರು ಕರೋನ ವೈರಸ್ ಸೋಂಕಿಗೆ ಬಲಿಯಾಗಿದ್ದರೂ ಕೂಡ ಅವರು ಸೋಂಕಿಗೆ ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಐದನೇ ಸಿರೊಲಾಜಿಕಲ್ ಸಮೀಕ್ಷೆಯು ಹೇಳಿದೆ ಎಂದು ಸರ್ಕಾರ ಮಂಗಳವಾರ(ಫೆ. 2) ತಿಳಿಸಿದೆ.
ಓದಿ : ಐಎಎಫ್ ಗೆ ಎಫ್ -15 ಎಕ್ಸ್ ಮಲ್ಟಿ-ರೋಲ್ ಯುದ್ಧ ವಿಮಾನ ನೀಡಲು ಅನುಮತಿಸಿದ ಬೈಡನ್ ಸರ್ಕಾರ
ಕೋವಿಡ್ ಆರಂಭದ ಹಂತದಲ್ಲಿ ತತ್ತರಿಸಿ ಹೋಗಿದ್ದ ದೆಹಲಿ, ಈಗ ಚೇತರಿಸಿಕೊಳ್ಳುತ್ತಿದೆ, ಮಾತ್ರವಲ್ಲದೇ ಪ್ರತಿರಕ್ಷೆಯತ್ತ ಮುಖಮಾಡುತ್ತಿದೆ ಎಂದು ಸಮೀಕ್ಷೆ ಸೂಚಿಸಿದೆ.
ಸೋಂಕನ್ನು ತಡೆಯುವ ಪ್ರತಿರಕ್ಷಾ ಗುಣ ದೇಹದಲ್ಲಿ ಬೆಳವಣಿಗೆಯಾದಾಗ ಸೋಂಕಿನ ಹರಡುವಿಕೆ ನಿಧಾನಗೊಳ್ಳುತ್ತದೆ. ಆದರೇ, ಜನರು ಎಚ್ಚರ ತಪ್ಪಿ ನಡೆದುಕೊಳ್ಳಬಾರದು ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
“ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಸಿದ ಐದನೇ ಸಿರೊ ಸಮೀಕ್ಷೆಯಲ್ಲಿ, ಜನಸಂಖ್ಯೆಯ ಶೇಕಡಾ 56.13 ರಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ. ಜನವರಿ 15 ರಿಂದ 23 ರವರೆಗೆ ನಡೆಸಿದ ಸುಮಾರು 28,000 ಮಾದರಿಗಳನ್ನು ಒಳಗೊಂಡ ಅತಿದೊಡ್ಡ ಸಮೀಕ್ಷೆಯಾಗಿದೆ” ಎಂದು ಜೈನ್ ತಿಳಿಸಿದ್ದಾರೆ.
ಓದಿ : ಚಿತ್ರದುರ್ಗ: ಎಸಿಎಫ್ ಶ್ರೀನಿವಾಸ್ ಮನೆ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ಜಪ್ತಿ