Advertisement

ಹೌರಾ : ಪ್ರಸಾದ ತಿಂದ 400ಕ್ಕೂ ಅಧಿಕ ಮಂದಿ ಅಸ್ವಸ್ಥ

04:38 PM Mar 22, 2018 | udayavani editorial |

ಹೌರಾ, ಪಶ್ಚಿಮ ಬಂಗಾಲ : ಹೌರಾ ಜಿಲ್ಲೆಯ ಕಕ್ರಾಯಿ ಗ್ರಾಮದಲ್ಲಿ  ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೋಗ ಪ್ರಸಾದವನ್ನು ಸೇವಿಸಿದ ಸುಮಾರು 400ಕ್ಕೂ ಅಧಿಕ ಮಂದಿ ಅಸ್ವಸ್ಥರಾದರೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

Advertisement

ಸುಮಾರು 125 ಮಂದಿ ಅಸ್ವಸ್ಥರನ್ನು ದೇವೀಪುರ ಮತ್ತು ಜಂಗಲ್‌ಪಾರಾದಲ್ಲಿ ಎರಡು ಆಸ್ಪತ್ರೆಗಳಿಗೆ ಸೇರಿಸಲಾಯಿತು ಎಂದು ಮುಖ್ಯ ಆರೋಗ್ಯಾಧಿಕಾರಿ ಭವಾನಿ ದಾಸ್‌ ತಿಳಿಸಿದ್ದಾರೆ. 

ಅಸ್ವಸ್ಥರಾಗಿರುವ ಇನ್ನೂ 300 ಮಂದಿ ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. 

ಭೋಗ ಪ್ರಸಾದ ತಿಂದ ಎಲ್ಲರೂ ವಾಂತಿ ಬೇಧಿ, ಹೊಟ್ಟೆ ನೋವು ಮುಂತಾದ ತೊಂದರೆಗಳನ್ನು ಅನುಭವಿಸಿದರು.ಭೋಗ ಪ್ರಸಾದವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next