Advertisement

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ 300ಕ್ಕೂ ಅಧಿಕ ಉಗ್ರರು ವಾಸ್ತವ್ಯ: ಡಿಜಿಪಿ

10:37 AM May 20, 2020 | Nagendra Trasi |

ಜಮ್ಮು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 300ಕ್ಕೂ ಅಧಿಕ ಉಗ್ರರು ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

Advertisement

ಜಮ್ಮು-ಕಾಶ್ಮೀರದೊಳಕ್ಕೆ ಉಗ್ರರನ್ನು ಕಳುಹಿಸುವ ಪಾಕಿಸ್ತಾನದ ಯೋಜನೆಯನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಬಿಗಿ ಭದ್ರತೆ ಹಾಗೂ ಕಣ್ಗಾವಲು ಇಡಲಾಗಿದೆ ಎಂದು ಹೇಳಿದರು.

ರಾಜೌರಿ ಪೂಂಚ್ ಪ್ರದೇಶದಲ್ಲಿ ಈಗಾಗಲೇ ಉಗ್ರರು ಒಳನುಸುಳುವ ನಾಲ್ಕು ಘಟನೆಗಳು ನಡೆದಿದ್ದು, ಅದನ್ನು ತಡೆಯಲಾಗಿದೆ ಎಂದು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಐಎಸ್ ಐ, ಸೇನೆ ಹಾಗೂ ಇತರ ಏಜೆನ್ಸಿಗಳು ತುಂಬಾ ಸಕ್ರಿಯವಾಗಿದ್ದು, ಗಡಿನಿಯಂತ್ರಣ ಪ್ರದೇಶದಲ್ಲಿ ಉಗ್ರರಿಗೆ ತರಬೇತಿ ನೀಡುವ ಕೆಲಸದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ. ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ಪ್ರದೇಶದಲ್ಲಿ ಅಂದಾಜು 150 ಮಂದಿ ಉಗ್ರರು ಹಾಗೂ ಜಮ್ಮು ಪ್ರದೇಶದಲ್ಲಿ 200 ಉಗ್ರರು ತಾತ್ಕಾಲಿಕ ಶಿಬಿರದಲ್ಲಿ ಠಿಕಾಣಿ ಹೂಡಿರುವುದಾಗಿ ಡಿಜಿಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next