Advertisement

ಪ್ರಧಾನಿಯಿಂದ ಉಡುಗೊರೆ ಪಡೆದುಕೊಳ್ಳಬೇಕೇ ಇಲ್ಲಿದೆ ಅವಕಾಶ

10:03 AM Sep 15, 2019 | sudhir |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯಿಂದ ಉಡುಗೊರೆ ಪಡೆದುಕೊಳ್ಳಬೇಕೆ? ಹಾಗಿದ್ದರೆ ಈ ಸದವಕಾಶ ಕಳೆದುಕೊಳ್ಳಬೇಡಿ. ಅಂದ ಹಾಗೆ ನೇರವಾಗಿ ಅವರಿಂದ ಉಡುಗೊರೆ ಪಡೆಯಲು ಸಾಧ್ಯವಿಲ್ಲ.

Advertisement

ಅವರು ವಿದೇಶ ಪ್ರವಾಸಗಳಿಗೆ ತೆರಳಿದ್ದ ವೇಳೆ ಪಡೆದುಕೊಂಡ ವಿಶೇಷ ವಸ್ತುಗಳನ್ನು ಹರಾಜು ಹಾಕುವ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಿದೆ. ಅ.3ರ ವರೆಗೆ ಅದನ್ನು ಖರೀದಿಸಲು ಅವಕಾಶವಿದೆ. ಅದರ ಮಾರಾಟದಿಂದ ಸಿಗುವ ಮೊತ್ತವನ್ನು “ನಮಾಮಿ ಗಂಗೆ‘ ಯೋಜನೆಗೆ ಬಳಸಲಾಗುತ್ತದೆ.

ಶಾಲುಗಳು, ಜಾಕೆಟ್‌ಗಳು ಮತ್ತು ಪೇಟಾಗಳು, ಸ್ಮರಣಿಕೆಗಳು ಸೇರಿದಂತೆ 2,700ಕ್ಕೂ ಅಧಿಕ ವಸ್ತುಗಳನ್ನು ಹರಾಜು ಹಾಕಲಾಗುತ್ತದೆ.

ನವದೆಹಲಿಯ ರಾಷ್ಟ್ರೀಯ ಆಧುನಿಕ ಕಲೆಗಳ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅದನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಪಡೆದುಕೊಂಡ 500 ಸ್ಮರಣಿಕೆಗಳನ್ನು “ಸ್ಮತಿ ಚಿನ್ಹ್‘ ಎಂಬ ಹೆಸರಿನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ನವದೆಹಲಿಯಲ್ಲಿಯೇ ಖರೀದಿಸುವವರು ರಾಷ್ಟ್ರೀಯ ಆಧುನಿಕ ಕಲೆಗಳ ಗ್ಯಾಲರಿಗೆ ಬೆಳಗ್ಗೆ 11 ರಿಂದ ರಾತ್ರಿ 8ರ ವರೆಗೆ ತೆರಳಿ ಖರೀದಿಸಬಹುದು. ಆನ್‌ಲೈನ್‌ ಖರೀದಿಗೆ ಗೆ www.pmmementos.gov.in ಭೇಟಿ ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next