ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸೋಮವಾರ (ಮಾರ್ಚ್ 14) 19ನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಯುದ್ಧಗ್ರಸ್ತ ಉಕ್ರೇನ್ ನಿಂದ 2.6 ಮಿಲಿಯನ್ ಗಿಂತಲೂ ಅಧಿಕ ಮಂದಿ ಪಲಾಯನಗೊಂಡಿದ್ದಾರೆ. ಅಲ್ಲದೇ ರಷ್ಯಾದ ಭೀಕರ ದಾಳಿಗೆ 2,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಮರಿಯುಪೋಲ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಖಜಾನೆಯಿಂದ ಮೇಲುಕೋಟೆಗೆ ವೈರಮುಡಿ ಕಿರೀಟ; ದಾರಿಯುದ್ದಕ್ಕೂ ಗ್ರಾಮಸ್ಥರಿಂದ ಪೂಜೆ
ರಷ್ಯಾ ದಾಳಿಯಿಂದಾಗಿ ಕೀವ್ ನಲ್ಲಿರುವ ಏವಿಯೇಷನ್ ಇಂಡಸ್ಟ್ರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ವಿವರಿಸಿದ್ದು, ರಷ್ಯಾ ಪಡೆಯ ಶೆಲ್ ದಾಳಿಯಿಂದಾಗಿ ಕೀವ್ ನ ಕಟ್ಟಡವೊಂದು ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈಗಾಗಲೇ ಮೆಲಿಟೊಪೋಲ್ ಮೇಯರ್ ಅನ್ನು ರಷ್ಯಾದ ಸೈನಿಕರು ಅಪಹರಿಸಿದ್ದು, ಅಮೆರಿಕದ ಪತ್ರಕರ್ತರೊಬ್ಬರನ್ನು ರಷ್ಯಾ ಸೇನೆ ಗುಂಡಿಕ್ಕಿ ಹತ್ಯೆಗೈದಿದೆ. ಮತ್ತೊಂದೆಡೆ ಎಲ್ವಿವ್ ನ ಸೇನಾ ನೆಲೆ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 35 ಮಂದಿ ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಉಕ್ರೇನ್ ನ ಡೊನೆಟಸ್ಕ್ , ಲುಹಾನ್ಸಕ್ ಸುತ್ತಮುತ್ತಲಿನ ಪ್ರದೇಶಗಳು ರಷ್ಯಾ ಸೇನೆಯ ನಿಯಂತ್ರಣದಲ್ಲಿರುವುದಾಗಿ ವರದಿ ವಿವರಿಸಿದೆ. ಉಕ್ರೇನ್ ಯುದ್ಧದ ವಿಚಾರದಲ್ಲಿ ತಮಗೆ ಆರ್ಥಿಕ ಮತ್ತು ಮಿಲಿಟರಿ ನೆರವು ನೀಡಬೇಕೆಂದು ಚೀನಾದ ಬಳಿ ರಷ್ಯಾ ಮನವಿ ಮಾಡಿಕೊಂಡಿರುವುದಾಗಿ ಅಮೆರಿಕ ನೀಡಿತ್ತು.
ಉಕ್ರೇನ್ ವಿಚಾರದಲ್ಲಿ ದುರದುದ್ದೇಶದಿಂದ ಅಮೆರಿಕ ರಷ್ಯಾದ ವಿರುದ್ಧ ಸುಳ್ಳು ಮಾಹಿತಿಯನ್ನು ಹರಡುತ್ತಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿರುವುದಾಗಿ ವರದಿ ತಿಳಿಸಿದೆ.