Advertisement

ಜೂನ್ 1ರಿಂದ ರೈಲುಗಳ ಓಡಾಟ; ಗುರುವಾರ 4ಗಂಟೆವರೆಗೆ ಎಷ್ಟು ಟಿಕೆಟ್ ಬುಕ್ ಆಗಿದೆ ಗೊತ್ತಾ?

08:14 PM May 21, 2020 | Nagendra Trasi |

ನವದೆಹಲಿ:ಜೂನ್ 1ರಿಂದ ಹೆಚ್ಚುವರಿಯಾಗಿ 200 ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದ್ದರಿಂದ ಗುರುವಾರ 4ಗಂಟೆವರೆಗೆ ಬರೋಬ್ಬರಿ 2.37 ಲಕ್ಷ ಟಿಕೆಟ್ ಬುಕ್ಕಿಂಗ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಐಆರ್ ಸಿಟಿಸಿ ವೆಬ್ ಸೈಟ್ ನ ಅಥವಾ ಮೊಬೈಲ್ ಆ್ಯಪ್ ಮೂಲಕ ಮಾತ್ರ ಇ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇಲಾಖೆಯ ಅಂಕಿ ಅಂಶದ ಪ್ರಕಾರ, 4ಗಂಟೆವರೆಗೆ 5,51,724 ಪ್ರಯಾಣಿಕರು 2,37,751 ಟಿಕೆಟ್ ಬುಕ್ ಮಾಡಲಾಗಿದೆ ಎಂದು ವಿವರಿಸಿದೆ.

ಡ್ಯುರೋಂಟೋಸ್, ಸಂಪರ್ಕ್ ಕ್ರಾಂತಿ, ಜನ್ ಶತಾಬ್ದಿ ಹಾಗೂ ಪೂರ್ವ ಎಕ್ಸ್ ಪ್ರೆಸ್ ಸೇರಿದಂತೆ ಹಲವು ಜನಪ್ರಿಯ ರೈಲುಗಳು ಪಟ್ಟಿಯಲ್ಲಿ ಸೇರಿದೆ. 1ಗಂಟೆವರೆಗೆ 76 ರೈಲುಗಳಲ್ಲಿ ಸೀಟು ಲಭ್ಯವಿದ್ದು, 1,78,990 ಟಿಕೆಟ್ ಬುಕ್ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಿಲ್ಲವಾಗಿತ್ತು. ಈ ವಿಶೇಷ ರೈಲುಗಳಲ್ಲಿ 30 ದಿನಗಳ ಮೊದಲೇ ಟಿಕೆಟ್ ಅನ್ನು ಆನ್ ಲೈನ್ ಮೂಲಕವೇ ಕಾಯ್ದಿರಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next