Advertisement
ತಾಲೂಕಿನ 27 ಗ್ರಾ.ಪಂ.ಗಳಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿ.ಪಂ. ಮಾರ್ಗ ದರ್ಶನದಲ್ಲಿ ತಾ.ಪಂ. ವತಿಯಿಂದ ಪ್ರತೀ ಗ್ರಾ.ಪಂ. ಅಧಿಕಾರಿ, ಸಿಬಂದಿ ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಮೇಲ್ವಿಚಾರಣ ಹಂತದ ಅಧಿಕಾರಿಗಳ ಸಮನ್ವಯದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
Related Articles
Advertisement
ಸೆ.3ರಂದು ಗ್ರಾಮೀಣ ಪ್ರದೇಶದ ಎಲ್ಲ ಅರ್ಹ ನಾಗರಿಕರಿಗೆ ಉದ್ಯೋಗ ಚೀಟಿ ನೀಡುವ ಸದುದ್ದೇಶದೊಂದಿಗೆ ಜಾಬ್‌ಕಾರ್ಡ್ ಮೇಳ ಅಭಿಯಾನ ಆರಂಭಿಸಲಾಗಿತ್ತು. 14,330 ಜಾಬ್‌ಕಾರ್ಡ್ ಹೊಂದಿದ್ದ ಕುಟುಂಬಗಳ ಸಂಖ್ಯೆಯನ್ನು ಕೇವಲ 3 ತಿಂಗಳುಗಳ ಅವಧಿಯಲ್ಲಿ 26,391ಕ್ಕೆ ಏರಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ 12,061 ಕುಟುಂಬಗಳಿಗೆ ಜಾಬ್‌ಕಾರ್ಡ್‌ಗಳನ್ನು ಗ್ರಾ.ಪಂ. ಸಿಬಂದಿ, ಚುನಾಯಿತ ಪ್ರತಿನಿಧಿಗಳು, ಜಿಪಿಎಲ್‌ಎಫ್, ಸ್ವಸಹಾಯ ಸಂಘ, ಎಲ್.ಸಿ.ಆರ್.ಪಿ., ಎಂ.ಬಿ.ಕೆ. ಅವರ ಸಹಕಾರದಿಂದ ನೀಡಿದೆ. 2021ರಲ್ಲಿ 869 ಸಂಜೀವಿನಿ ಸ್ವಸಹಾಯ ಸಂಘಗಳಿವೆ. ಇದರಲ್ಲಿ 739 ಮಹಿಳೆಯರು 284 ಪ.ಪಂಗಡ 10,262, ಇತರ ವರ್ಗದ ಮಹಿಳೆಯರು ಸದಸ್ಯರಾ ಗಿರುವರು. ತಾ.ಪಂ. ಮಿಷನ್ 50 ಅಭಿಯಾನವನ್ನು ಕಾರ್ಕಳದಲ್ಲಿ ಜಾರಿಗೆ ತಂದ ಬಳಿಕ ಹೊಸದಾಗಿ 76 ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. 76 ಪ. ಜಾತಿ ಮಹಿಳೆಯರು, 107 ಪ. ಪಂಗಡದ ಮಹಿಳೆಯರು, 653 ಇತರ ವರ್ಗದ ಮಹಿಳೆಯರು ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಸ್ವಸಹಾಯ ಸಂಘಗಳಿಗೆ ನರೇಗಾ ಯೋಜನೆಯ ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿ ನೀಡಲು ಪಿಡಿಒ ಅವರಿಗೆ ಕಾಲಕಾಲಕ್ಕೆ ಸೂಚನೆ ನೀಡುತ್ತಾ ಬರಲಾಗಿದೆ. ಫಲವಾಗಿ 287 ಮಂದಿ ಮಹಿಳೆಯರು 292 ಕಾಮಗಾರಿಗಳಿಗೆ ಬೇಡಿಕೆ ಇರಿಸಿದ್ದಾರೆ. ಗರಿಷ್ಠ ಪ್ರಮಾಣದಲ್ಲಿ ಸ್ವಸಹಾಯ ಸಂಘದ ಸದಸ್ಯರನ್ನು ನರೇಗಾ ಯೋಜನೆಯಲ್ಲಿ ಭಾಗೀ ದಾರರಾಗುವಂತೆ ಮಾಡುವ ದೂರದೃಷ್ಟಿಯ ಪ್ರಯತ್ನ ಸಫಲತೆ ಕಾಣುತ್ತಿದೆ. ಯಾಕೆ ಆಸಕ್ತಿ?
ಲಾಕ್‌ಡೌನ್ ಬಳಿಕ ಹೊರ ಜಿಲ್ಲೆ, ರಾಜ್ಯಗಳ ಮಂದಿ ಊರಿಗೆ ಆಗಮಿಸಿ ಸ್ವ ಉದ್ಯೋಗದ ಕಡೆಗೆ ಆಸಕ್ತಿ ವಹಿಸುತ್ತಿದ್ದಾರೆ. ಅವರ ಆಸಕ್ತಿ ಗಮನಿಸಿ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಯೋಜನೆ ಯಲ್ಲಿ ಏನೆಲ್ಲ ಅವಕಾಶವಿದೆ ಎನ್ನುವ ಮಾಹಿತಿಯನ್ನು ನೀಡುತ್ತಿರುವು ದರ ಪರಿಣಾಮ ಹೆಚ್ಚು ಮಂದಿ ಯೋಜನೆಯನ್ನು ಬಳಸಿಕೊಳ್ಳುವ ಕಡೆ ಆಸಕ್ತಿ ವಹಿಸುತ್ತಿದ್ದಾರೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಸಾರ್ವಜನಿಕರಲ್ಲಿ ಜಾಗೃತಿ
ಹಿಂದೆಲ್ಲ ವರ್ಷಕ್ಕೆ ಒಂದೇ ಸೌಲಭ್ಯ ಸಿಗುವುದು ಎನ್ನುವ ಕಲ್ಪನೆ ಜನರಲ್ಲಿತ್ತು. ಈಗ ವರ್ಷಕ್ಕೆ 2-3 ಯೋಜ ನೆಗಳನ್ನು ಪಡೆದುಕೊಂಡು ಹೆಚ್ಚು ಲಾಭ ಗಳಿಸಲು ಸಾಧ್ಯ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ತಿಳಿ ಹೇಳುವ ಪ್ರಯತ್ನ ಗ್ರಾ.ಪಂ. ಮಟ್ಟದಲ್ಲಿ ಕರಪತ್ರ, ಕಾರ್ಯಾಗಾರಗಳ ಮೂಲಕ ನಡೆಸುತ್ತಿದ್ದೇವೆ.
-ಗುರುದತ್ತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಾ.ಪಂ. ಕಾರ್ಕಳ – ಬಾಲಕೃಷ್ಣ ಭೀಮಗುಳಿ