Advertisement

ದತ್ತು ಸ್ವೀಕರಿಸಿದ್ದ 1,100 ಮಕ್ಕಳು ವಾಪಸ್‌

10:05 AM Jan 07, 2020 | Team Udayavani |

ಹೊಸದಿಲ್ಲಿ: ಕಳೆದ ಐದು ವರ್ಷದಲ್ಲಿ ದತ್ತು ಸ್ವೀಕರಿಸಲಾಗಿದ್ದ ಸಾವಿರಕ್ಕೂ ಅಧಿಕ ಮಕ್ಕಳು ಮರಳಿ ತಮ್ಮ ಗೂಡು ಸೇರಿಕೊಂಡಿದ್ದಾರೆ. 2014ರಿಂದ 2019ರ ಅವಧಿಯಲ್ಲಿ ಪೋಷಕರು ದತ್ತು ಸ್ವೀಕರಿಸಿದ್ದ 1,100 ಮಕ್ಕಳು ಹೊಂದಾಣಿಕೆ‌ ಸಮಸ್ಯೆಯಿಂದಾಗಿ ಮಕ್ಕಳ ಪಾಲನಾ ಸಂಸ್ಥೆಗೆ ಹಿಂದಿರುಗಿದ್ದಾರೆ. 8 ವರ್ಷ ಮೇಲ್ಪಟ್ಟ ಮಕ್ಕಳು, ಪಾಲನಾ ಕೇಂದ್ರದಲ್ಲಿ ಮುಕ್ತವಾಗಿ ಬೆಳೆದಿರುತ್ತಾರೆ. ದತ್ತು ಸ್ವೀಕರಿಸಿದ ಬಳಿಕ ಹೊಂದಾಣಿಕೆ ಕೊರತೆಯಿಂದ ಮರಳಿ ಕೇಂದ್ರಕ್ಕೆ ವಾಪಸ್‌ ಆಗುತ್ತಿದ್ದಾರೆ.

Advertisement

ಆರ್‌ಟಿಐಯಡಿ ಮಾಹಿತಿ ಪಡೆದಿರುವ ನೋಡೆಲ್‌ ದತ್ತು ಸ್ವೀಕಾರ ಮಂಡಳಿಯು ಅಂಕಿ ಅಂಶಗಳೊಂ ದಿಗೆ ಇದನ್ನು ದೃಢಪಡಿಸಿದೆ. ಮಹಾರಾಷ್ಟ್ರ-273, ಮಧ್ಯ ಪ್ರದೇಶ-92, ಒಡಿಶಾ-88 ಹಾಗೂ ಕರ್ನಾಟಕದ 60 ಮಕ್ಕಳು ವಾಪಸ್‌ ತಮ್ಮ ಕೇಂದ್ರಕ್ಕೆ ವಾಪಸಾಗಿದ್ದಾರೆ. ದತ್ತು ಸ್ವೀಕರಿಸುವ ವೇಳೆ ಪೋಷಕರು ಹಾಗೂ ಮಕ್ಕಳ ಜತೆ ಸಮಾಲೋಚನೆ ನಡೆಸಬೇಕಿದೆ ಎಂದು ಮಂಡಳಿಯು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next