Advertisement

ಮದುವೆಯಲ್ಲಿ ಕ್ಯಾರೆಟ್‌ ಹಲ್ವ ತಿಂದು 105 ಮಂದಿ ಅಸ್ವಸ್ಥ

10:53 AM Feb 19, 2018 | udayavani editorial |

ಪಾಲಘರ್‌ : ಮದುವೆ ಸಮಾರಂಭದಲ್ಲಿ ಸಿಹಿ ತಿಂಡಿ ತಿಂದ ಸುಮಾರು 105 ಮಂದಿ ಅಸ್ವಸ್ಥರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಹಿತಿಂಡಿಯು ವಿಷಾಹಾರವಾಗಿ ಪರಿವರ್ತಿತವಾಗಿರಬಹುದು ಎಂದವರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಮದುವೆ ಊಟದಲ್ಲಿ ಕ್ಯಾರೆಟ್‌ ಹಲ್ವ ತಿಂದ ಈ 105 ಮಂದಿಗೆ ತಲೆ ಸುತ್ತಿ ಬಂದು ವಾಂತಿ ಮಾಡಲು ಆರಂಭಿಸಿದರು. ಒಡನೆಯೇ ಅವರನ್ನು ವಿವಿಧ ಆಸ್ಪತ್ರೆಗಳಿಗೆ ಒಯ್ಯಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ವಿಷಾಹಾರದ ಮಾದರಿಯನ್ನು  ಆಹಾರ ಮತ್ತು ಔಷಧ ಪ್ರಯೋಗಾಲದ ಅಧಿಕಾರಿಗಳು ಒಯ್ದಿದ್ದಾರೆ. ಪೊಲೀಸರು ಈ ತನಕ ಯಾವುದೇ ಕೇಸು ದಾಖಲಿಸಿಕೊಂಡಿಲ್ಲ. ಆದರೆ ತನಿಖೆ ಜಾರಿಯಲ್ಲಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next