ಮಹಾರಾಷ್ಟ್ರ: ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ʼಲವ್ ಜಿಹಾದ್ʼ ಪ್ರಕರಣಗಳು ನಡೆದಿದೆ ಎಂದು ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಬುಧವಾರ ( ಮಾ. 8 ರಂದು) ಕಲಾಪದಲ್ಲಿ ಹೇಳಿದ್ದಾರೆ.
ಮಹಿಳಾ ದಿನಾಚರಣೆ ದಿನ ರಾಜ್ಯ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಮಾತಾನಾಡಿದ ಸಚಿವರು, ಮಹಾರಾಷ್ಟ್ರದಲಿ 1 ಲಕ್ಷಕ್ಕೂ ಅಧಿಕ ʼಲವ್ ಜಿಹಾದ್ʼ ಪ್ರಕರಣಗಳು ನಡೆದಿದ್ದು, ಭವಿಷ್ಯದಲ್ಲಿ ಶ್ರದ್ಧಾ ವಾಕರ್ ನಂತಹ ಘಟನೆಗಳು ನಡೆಯದಂತೆ ತಡೆಯಲು ಏಕನಾಥ್ ಶಿಂಧೆ ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಶ್ರದ್ಧಾ ವಾಕರ್ ನಂತಹ ಪ್ರಕರಣವನ್ನು ತಡೆಯಲು ಸರ್ಕಾರ ರಚಿಸಿರುವ ಅಂತರ್‌ಧರ್ಮೀಯ ವಿವಾಹ ಸಮಿತಿಯ ಬಗ್ಗೆಯೂ ಮಾತಿನ ವೇಳೆ ಉಲ್ಲೇಖಿಸಿದ್ದಾರೆ.
ಟ್ವಟರ್ ನಲ್ಲಿ ತಾವು ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಹೊಸ ಮಹಿಳಾ ನೀತಿಯನ್ನು ರಾಜ್ಯ ವಿಧಾನಮಂಡಲದ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.