Advertisement

60 ಕೋಟಿ ಯುಪಿಐ ವ್ಯವಹಾರ: ಪ್ರಧಾನಿ ಮೋದಿ ಸಂತಸ

09:04 PM Aug 02, 2022 | Team Udayavani |

ನವದೆಹಲಿ: ಇದೇ ಜುಲೈನಲ್ಲಿ ದೇಶದಲ್ಲಿ ‘ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌’ (ಯುಪಿಐ) ಆಧಾರದ ಒಟ್ಟಾರೆ 600 ಕೋಟಿ ಡಿಜಿಟಲ್‌ ಪಾವತಿಗಳು ಆಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಹೊಸ ಬಗೆಯ ತಂತ್ರಜ್ಞಾನವನ್ನು ದೇಶದ ಸಮಸ್ತ ನಾಗರಿಕರು ಬಳಸಿದಾಗ ದೇಶದ ಆರ್ಥಿಕತೆ ಸ್ವತ್ಛವಾಗಿರುತ್ತದೆ ಎಂಬುದನ್ನು ಈ ಬೆಳವಣಿಗೆ ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಯುಪಿಐ ಅಡಿಯಲ್ಲಿ ಜುಲೈನಲ್ಲಿ 600 ಕೋಟಿ ವ್ಯವಹಾರಗಳು ನಡೆದಿರುವ ಬಗ್ಗೆ ಟ್ವೀಟ್‌ ಮಾಡಿದ್ದರು. ಆ ಟ್ವೀಟ್‌ಗೆ ಉತ್ತರವಾಗಿ ಮೋದಿಯವರು ಮೇಲಿನಂತೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next